ಕಾಂಗ್ರೆಸ್ ಬೆಂಬಲಿತ ಸಂಪಿಗೆ ರಾಘು ಕೋಟ್ಯಾನ್ ಆತ್ಮಹತ್ಯೆ

ಜಾಹೀರಾತು/Advertisment
ಜಾಹೀರಾತು/Advertisment

 ಕಾಂಗ್ರೆಸ್ ಬೆಂಬಲಿತ ಸಂಪಿಗೆ ರಾಘು ಕೋಟ್ಯಾನ್ ಆತ್ಮಹತ್ಯೆ





  ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಾಘು ಕೋಟ್ಯಾನ್ ಸಂಪಿಗೆ ಅವರು ಸೋಮವಾರ ಬೆಳಿಗ್ಗೆ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

   ತನ್ನ ಮನೆ ಹಿಂಬದಿಯ ಕೊಠಡಿಯಲ್ಲಿ ನೇಣಿಗೆ ಶರಣಾಗಿರುವ ಅವರು, ಇತ್ತೀಚಿಗೆ ಕೆಲ ದಿನಗಳಿಂದ ಆರ್ಥಿಕ ಸಮಸ್ಯೆಗೊಳಗಾಗಿದ್ದರೆನ್ನಲಾಗಿದೆ.

  ಸಣ್ಣ ಮಟ್ಟಿನ ಗುತ್ತಿಗೆದಾರರಾಗಿ, ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಅವರು ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು,ಓರ್ವ ಪುತ್ರಿಯನ್ನು ಅಗಲಿದ್ದಾರೆ

Post a Comment

0 Comments