ಶಿರ್ತಾಡಿಯಲ್ಲಿ ಆದಿಗ್ರಾಮೋತ್ಸವ :
ಸಮಾಜಮುಖಿ ಚಿಂತಕಿ ಗಂಗಮ್ಮ ಸುಬ್ಬರಾವ್ ಗೆ ಗೌರವ
ಮೂಡುಬಿದಿರೆ: ಅಜೆಕಾರಿನ ಆದಿಗ್ರಾಮೋತ್ಸವ ಬೆಳ್ಳಿ ಹಬ್ಬದ ಸರಣಿ ಕಾರ್ಯಕ್ರಮದಲ್ಲಿ ತುಳುವ ಸಾಧಕರಿಗೆ ನಮ್ಮ ನಮನ ಸರಣಿಯ ಪ್ರತಿಷ್ಠಿತ ಗೌರವವನ್ನು ಶಿರ್ತಾಡಿಯ ಸಾಧಕಿ,ಜ್ಯೋತಿಷಿ, ಸಮಾಜ ಮುಖಿ ಚಿಂತಕಿ ಗಂಗಮ್ಮ ಸುಬ್ಬರಾವ್ ಅವರಿಗೆ ಆಂಗಿರಸದಲ್ಲಿ ಪ್ರದಾನ ಮಾಡಲಾಯಿತು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಗ್ರಾಮೋತ್ಸವದ ಬೆಳ್ಳಿಹಬ್ಬ ಸರಣಿ ಕಾರ್ಯಕ್ರಮದಲ್ಲಿ ಹಿರಿಯ ಸಾಧಕರನ್ನು ಹುಡುಕಿ ನಡೆಸುವ ಇಂತಹ ಕಾರ್ಯಕ್ರಮಗಳು ಪ್ರಶಂಸಾರ್ಹ ಎಂದು ಹೇಳಿದರು.
ಗೌರವಕ್ಕೆ ಪ್ರತಿಕ್ರಿಯಿಸಿದ ಗಂಗಮ್ಮ ಅವರು, ಸಂಕಷ್ಟದಿಂದ ಬದುಕು ಕಟ್ಟಿಕೊಂಡೆ ತನ್ನ ಮಕ್ಕಳು ಮತ್ತು ಉಳಿದವರ ಮಕ್ಕಳು ಎಂದು ಬೇಧ ಎಣಿಸಲಿಲ್ಲ. ಸರ್ವರ ಒಳಿತಿಗಾಗಿ ಯೋಚಿಸಿದರೆ ನೆಮ್ಮದಿಯ ಬದುಕು ಬದುಕುವುದು ಸಾಧ್ಯ ಎಂದು ಗಂಗಮ್ಮ ಹೇಳಿದರು. ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಬೆಳ್ಳಿ ಹಬ್ಬದ ಸಂಚಾಲಕ, ಆದಿಗ್ರಾಮೋತ್ಸವ ದ ರೂವಾರಿ ಡಾ.ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿದ್ದರು. ಮಂದಾರ ಪ್ರತಿಷ್ಠಾನದ ಕಾರ್ಯದರ್ಶಿ ಮಂದಾರ ರಾಜೇಶ ಭಟ್, ಗ್ರಾಮೋತ್ಸವ ಸಮಿತಿಯ ಗೌರವಾಧ್ಯಕ್ಷ ಸಾಣೂರು ಅರುಣ್ ಶೆಟ್ಟಿಗಾರ್, ವಾಲ್ಪಾಡಿ ಕ್ರಿಕೆಟರ್ಸ್ ಅಧ್ಯಕ್ಷ, ಪತ್ರಕರ್ತ ಅಶ್ರಫ್ ವಾಲ್ಪಾಡಿ, ವಾಯ್ಸ್ ಆಫ್ ಆರಾಧನಾದ ನಿರ್ದೇಶಕಿ ಪದ್ಮಶ್ರೀ ನಿಡ್ಡೋಡಿ ಅತಿಥಿಗಳಾಗಿದ್ದರು. ಉಪನ್ಯಾಸಕ ಶ್ರೀಕಾಂತ್ ಹೊಳ್ಳ ಅವರು ಕುಟುಂಬದ ಪರವಾಗಿ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು. ಡಾ.ಸೋಮಶೇಖರ ಮಯ್ಯ ಸ್ವಾಗತಿಸಿದರು. ಅರ್ಚಿತ್ ಕಶ್ಯಪ್,ಅನನ್ಯ ಉಡುಪ, ಶ್ರೀವಾಣಿ ಮಯ್ಯ,ಶಿವಾನಿ, ಶರ್ವಾಣಿ ಕಾರ್ತಿಕ್,ಪ್ರದ್ಯುಮ್ನ ತಮ್ಮ ಹಾಡುಗಳ ಮೂಲಕ ರಂಜಿಸಿದರು. ಶಿಕ್ಷಕಿ ಶರಣ್ಯ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು. ಕವಯತ್ರಿ ಮಾನಸ ಪ್ರವೀಣ್ ಭಟ್ ವಂದಿಸಿದರು.
2 Comments
ನಾನು ಹಾಕಿದ ಕಮೆಂಟ್ ತೆಗೆಯುವುದಾದರೆ ನಾನು ಕಮೆಂಟಿಸುವುದೇ ತಪ್ಪೆಂದಾಗದೇ??
ReplyDeleteಮೊದಲ ಮೂರು ಪ್ಯಾರಾ..ಉದಯವಾಣಿ ಯಲ್ಲಿ ಬಂದದ್ದರ ಮಕ್ಕಿ
ReplyDelete