ಶಿರ್ತಾಡಿ : ಅರ್ಜುನಾಪುರ-ಅಮಣಿ ಸಂಪರ್ಕ ರಸ್ತೆ ಲೋಕಾರ್ಪಣೆ

ಜಾಹೀರಾತು/Advertisment
ಜಾಹೀರಾತು/Advertisment

 ಶಿರ್ತಾಡಿ : ಅರ್ಜುನಾಪುರ-ಅಮಣಿ ಸಂಪರ್ಕ ರಸ್ತೆ ಲೋಕಾರ್ಪಣೆ



ಮೂಡುಬಿದಿರೆ: ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಶಿರ್ತಾಡಿ ಗ್ರಾ.ಪಂ.ವ್ಯಾಪ್ತಿಯ ಅರ್ಜುನಾಪುರ ದೇವಸ್ಥಾನದಿಂದ ಅಮಣಿ ಪರಿಶಿಷ್ಟ ಕಾಲನಿಗೆ ರೂ.2.33 ಕೋ.ವೆಚ್ಚದಲ್ಲಿ ನಿರ್ಮಾಣವಾಗಿರುವ ಸಂಪರ್ಕ ರಸ್ತೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ಲೋಕಾರ್ಪಣೆಗೊಳಿಸಿದರು.

  ನಂತರ ಮಾತನಾಡಿದ ಕೋಟ್ಯಾನ್ ಈ ಸಂಪರ್ಕ ರಸ್ತೆಯು ಇಲ್ಲಿನ ಜನರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಮೂಲಭೂತ ಸೌಕರ್ಯಗಳನ್ನು  ಒದಗಿಸುವ   ನಿಟ್ಟಿನಲ್ಲಿ ರಸ್ತೆ, ನೀರು ಮತ್ತು ದಾರಿದೀಪಗಳಿಗೆ  ಆದ್ಯತೆಯನ್ನು ನೀಡಲಾಗುತ್ತಿದೆ ಎಂದರು.

ನೆಲ್ಲಿಕಾರು ಪಂಚಾಯತ್ ಅಧ್ಯಕ್ಷೆ ಸುಶೀಲಾ, ಸದಸ್ಯರಾದ ಜಯಂತ ಹೆಗ್ಡೆ, ಶಿರ್ತಾಡಿ ಗ್ರಾ.ಪಂ.ಸದಸ್ಯರಾದ ಸಂತೋಷ್ ಅಂಚನ್ , ಸಂತೋಷ್ ಶೆಟ್ಟಿ, ನಾಗವೇಣಿ ಗುತ್ತಿಗೆದಾರ ಕಿರಣ್ , ನೆಲ್ಲಿಕಾರು ಗ್ರಾ.ಪಂಚಾಯತ್ ಸಿಬಂಧಿ ಪ್ರಶಾಂತ್ ಕುಮಾರ್ ಜೈನ್ ಈ ಸಂದರ್ಭದಲ್ಲಿದ್ದರು

Post a Comment

0 Comments