ಮೂಡುಬಿದಿರೆ: ಆದರ್ಶ ಸಂಸ್ಥೆಯಿಂದ ಸ್ವಾವಲಂಬನಾ ದಿನಾಚರಣೆ
ಮೂಡುಬಿದಿರೆ: ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆ (ರಿ.) ಮೂಡುಬಿದಿರೆ ಇದರ ಆಶ್ರಯದಲ್ಲಿ ಸಂಸ್ಥೆಯ ಮೂಲಕ ಪ್ರವರ್ತಿಸಲ್ಪಟ್ಟು ಕಾರ್ಯನಿರ್ವಹಿಸುತ್ತಿರುವ ಸ್ವಸಹಾಯ ಸಂಘಗಳ 23ನೇ ವಾರ್ಷಿಕ ಹಾಗೂ ಸ್ವಾವಲಂಬನಾ ದಿನಾಚರಣೆಯು ವಿಜಯನಗರದ ಆದರ್ಶಧಾಮದಲ್ಲಿ ಭಾನುವಾರ ನಡೆಯಿತು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ.ಬೆಂಗಳೂರು ಇದರ ನಿರ್ದೇಶಕಿ ಭಾರತಿ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ಮನುಷ್ಯನಿಗೂ ಬದುಕಲು ಉತ್ತಮವಾದ ಆರೋಗ್ಯ ಮತ್ತು ನೆಮ್ಮದಿ ಇರಬೇಕು. ಅದಕ್ಕಾಗಿ ಹೊಟ್ಟೆಗೆ ಊಟ, ತೊಡಲು ಬಟ್ಟೆ, ಬಾಳಲು ಸೂರು ಮತ್ತು ಮನೆಗೆ ಬಂದಾಗ ಪ್ರೀತಿಸುವ ಕುಟುಂಬ, ಹೊರಗೆ ಹೋದಾಗ ಸಮಸ್ಯೆಗೆ ಸ್ಪಂದಿಸುವ ಬಂಧುಗಳು, ಸ್ನೇಹಿತರು, ಶ್ರಮಕ್ಕೆ ತಕ್ಕ ಪ್ರತಿಫಲ ಹಾಗೂ ನಿರ್ಭಯ ಸಮಾಜವಿದ್ದರೆ ನೆಮ್ಮದಿ ಸಾಧ್ಯ ಎಂದರು.
ಒಬ್ಬ ಮಹಿಳೆ ತನ್ನ ಜೀವನದ ಬಗ್ಗೆ ಪರಿಪೂರ್ಣವಾದ ಜ್ಞಾನವನ್ನು ಹೊಂದಿ ತನ್ನ ಜೀವನದ ನಿರ್ಣಯ ಹಾಗೂ ತೀರ್ಮಾನಗಳನ್ನು ಕೈಗೊಳ್ಳುವ ಸ್ವಾತಂತ್ರ್ಯಗಳನ್ನು ಹೊಂದಿರಬೇಕು. ತನ್ನ ಕುಟುಂಬದಲ್ಲಿರಬಹುದು ಅಥವಾ ಹೊರಗಡೆಯಿಂದ ಇರಬಹುದು ತನಗಿರುವ ಅಧಿಕಾರ, ಸಂಪನ್ಮೂಲಗಳನ್ನು ಬಳಸುವ ಅವಕಾಶಗಳನ್ನು ಕೂಡಾ ಹೊಂದಿರಬೇಕು.
ಅಸಮಾನತೆ, ಶೋಷಣೆಗೆ ಒಳಗಾಗದೆ ಶಿಕ್ಷಣ, ಉದ್ಯೋಗ, ವಿವಾಹ ಜೀವನ, ಆರೋಗ್ಯ, ಸಂತಾನೋತ್ಪತ್ತಿ ಹಾಗೂ ಎಲ್ಲಾ ಹಕ್ಕುಗಳನ್ನು ಅವಳೇ ಹೊಂದಬೇಕು. ಇಂತಹ ಅಂಶಗಳ ಬಗ್ಗೆ ಸ್ವಾತಂತ್ರ್ಯ ಹೊಂದಿ ಸ್ವಾಭಿಮಾನಿಯಾಗಿ ಆತ್ಮವಿಶ್ವಾಸದೊಂದಿಗೆ ಬಾಳುವ ಶಕ್ತಿಯೇ ಮಹಿಳಾ ಸಮಾನತೆ, ಸ್ವಾವಲಂಬನೆ ಮತ್ತು ಸಶಕ್ತತೆ ಎಂದರು.
ಕಿನ್ನಿಗೋಳಿ ಇಮ್ಮಾಕ್ಯೂಲೆಟ್ ಕೊನ್ಸೆಪ್ಷನ್ ಚಚ್ ೯ನ ವಿಗಾರ್ ರೆ.ಫಾ.ಫೌಸ್ಟಿನ್ ಲೋಬೋ ಸ್ವಾವಲಂಬನಾ ಸಂದೇಶವನ್ನು ನೀಡಿದರು.
ಸನ್ಮಾನ, ಬಹುಮಾನ ವಿತರಣೆ : ಸಂಸ್ಥೆಯು "ರಾಷ್ಟ್ರೀಯ ಶಿಕ್ಷಣ ನೀತಿ" ಕುರಿತು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಾದ ಸಹನಾ(ಪ್ರ), ಹೀನಾ ಫರ್ವೀನ್ (ದ್ವಿ) ಹಾಗೂ ಶೃತಿ ಅವರನ್ನು ಸನ್ಮಾನಿಸಿ ಬಹುಮಾನ ವಿತರಿಸಲಾಯಿತು.
ಸಹಾಯಹಸ್ತ : ಇತ್ತೀಚೆಗೆ ಮೃತರಾಗಿರುವ ಸ್ವಸಹಾಯ ಸಂಘ್ ಸದಸ್ಯ ಕೃಷ್ಣ ಅವರ ಪರವಾಗಿ ಪತ್ನಿ ಪ್ರೇಮ ಅವರಿಗೆ ಮತ್ತು ಪದ್ಮನಾಭ ಅವರಿಹಾರ ಪರಿಹಾರದ ಚೆಕ್, ಗಿರಿಜಾ ಅವರ ಮಗಳ ಮದುವೆಗೆ, ನಾಗಶ್ರೀ ಸ್ವಸಹಾಯ ತಂಡದ ಸದಸ್ಯೆ ಪ್ರೇಮಾ ಅವರ ಪತಿಯ ಚಿಕಿತ್ಸೆಗೆ ಆರ್ಥಿಕ ಸಹಕಾರವನ್ನು ನೀಡಲಾಯಿತು.
ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ, ಪತ್ರಕರ್ತ ಡಾ.ಶೇಖರ ಅಜೆಕಾರ್ ಅವರ ಪ್ರಬಂಧ ಸ್ಪರ್ಧೆಗಳ ಅವಲೋಕನಗೈದರು.
ದ.ಕ.ಸಹಕಾರಿಯ ಸಂಚಾಲಕ ಶ್ರೀವಿಜಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿದರು.
ಆದರ್ಶ ಸಂಸ್ಥೆಯ ಉಪಾಧ್ಯಕ್ಷ ಹಸ್ದುಲ್ಲಾ ಇಸ್ಮಾಯಿಲ್, ಆಡಳಿತ ಮಂಡಳಿಯ ಸದಸ್ಯೆ ಶೆರ್ಲಿ ಟಿ.ಬಾಬು, ಸದಸ್ಯ ಇಮಾನ್ಯುವೆಲ್ ಮೋನಿಸ್ ಉಪಸ್ಥಿತರಿದ್ದರು.
ಸಂಸ್ಥೆ ಅಧ್ಯಕ್ಷ ಜೇಕಬ್ ವರ್ಗೀಸ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ನವಚೇತನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ. ಇದರ ಅಧ್ಯಕ್ಷೆ ವಸಂತಿ ಪ್ರತಿಜ್ಞಾವಿಧಿ ಬೋಧಿಸಿದರು.ಗಣೇಶ್ ಬಾರ್ದಿಲ ಸಹಾಯಹಸ್ತದ ವಿವರ ನೀಡಿದರು. ಧರ್ಮಿಣಿ ಪ್ರಬಂಧ ವಿಜೇತರ ಹೆಸರುಗಳನ್ನು ವಾಚಿಸಿದರು.
ಸರಿತಾ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಬೇಬಿ ವಂದಿಸಿದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಸ್ವಸಹಾಯ ತಂಡದ ಸದಸ್ಯರಿಂದ ಮೂಡುಬಿದಿರೆ ಪೇಟೆಯಲ್ಲಿ ಜಾಗೃತಿ ಜಾಥಾ ನಡೆಯಿತು.
0 Comments