ಭರವಸೆ ಈಡೇರಿಸಿದ ಬಿಜೆಪಿ ರಾಜ್ಯಾಧ್ಯಕ್ಷರು: ಪಕ್ಷದ ವತಿಯಿಂದಲೇ ಉಚಿತ ರಿಕ್ಷಾದ ಜೊತೆಗೆ 5 ಲಕ್ಷ ನಗದು
ನವೆಂಬರ್ ತಿಂಗಳಲ್ಲಿ ಕಂಕನಾಡಿ ಗರೋಡಿ ಬಳಿ ಉಗ್ರ ಶಾರಿಕ್ ಎಂಬಾತನ ಭಯೋತ್ಪಾದನಾ ಕೃತ್ಯದಿಂದ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಂಭೀರ ಗಾಯಗೊಂಡು ಗುಣಮುಖರಾದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ನೂತನ ಆಟೋ ರಿಕ್ಷಾ ಮತ್ತು ಬಿಜೆಪಿ ವತಿಯಿಂದ 5 ಲಕ್ಷ ರೂ. ಮೌಲ್ಯದ ಚೆಕ್ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹಸ್ತಾಂತರಿಸಿದರು.
ಕುಕ್ಕರ್ ಬಾಂಬ್ ಸ್ಫೋಟದಿಂದ ಸಂಪೂರ್ಣ ಜಕಂಗೊಂಡಿದ್ದ ರಿಕ್ಷಾದಿಂದ ಕುಟುಂಬ ಕಂಗಾಲಾಗಿತ್ತು. ಈ ಸಂದರ್ಭದಲ್ಲಿ ರಿಕ್ಷಾದ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ನಳಿನ್ ಕುಮಾರ್ ಕಟೀಲು ಭರವಸೆ ನೀಡಿದ್ದರು. ಪುರುಷೋತ್ತಮ ಪೂಜಾರಿಯವರು ಚೇತರಿಸಿಕೊಳ್ಳುತ್ತಲೇ ಉಚಿತ ರಿಕ್ಷಾ ಹಾಗೂ ಅದರ ಜೊತೆಗೆ ಪಕ್ಷದ ವತಿಯಿಂದ 5 ಲಕ್ಷ ಪರಿಹಾರ ಧನ ನೀಡಲಾಗಿದೆ.
ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಪ್ರೇಮಾನಂದ ಶೆಟ್ಟಿ, ಸಂದೀಪ್ ಗರೋಡಿ, ಸುಧೀರ್ ಶೆಟ್ಟಿ, ಶರಣ್ ಪಂಪ್‌ವೆಲ್ ಮೊದಲಾದವರು ಉಪಸ್ಥಿತರಿದ್ದರು.
0 Comments