ಉಭಯ ಜಿಲ್ಲೆಯ ಗ್ಯಾರೇಜ್ ಮಾಲಕರ ದಶಕಗಳ ಬೇಡಿಕೆ ಈಡೇರಿಕೆ:ಶಾಸಕರ ಮನೆಗೆ ತೆರಳಿ ಅಭಿನಂದಿಸಿದ ಗ್ಯಾರೇಜ್ ಮಾಲಿಕರ ಸಂಘ

ಜಾಹೀರಾತು/Advertisment
ಜಾಹೀರಾತು/Advertisment

 ಉಭಯ ಜಿಲ್ಲೆಯ ಗ್ಯಾರೇಜ್ ಮಾಲಕರ ದಶಕಗಳ ಬೇಡಿಕೆ ಈಡೇರಿಕೆ:ಶಾಸಕರ ಮನೆಗೆ ತೆರಳಿ ಅಭಿನಂದಿಸಿದ ಗ್ಯಾರೇಜ್ ಮಾಲಿಕರ ಸಂಘ




ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಭಾಗದ ಗ್ಯಾರೇಜ್ ಮಾಲಕರ ಸಂಘ ಮಂಗಳೂರು  ಇವರ ಆಶ್ರಯದಲ್ಲಿ ರಾಜ್ಯದ ಗ್ಯಾರೇಜ್ ಕಾರ್ಮಿಕರ ಸಮಸ್ಯೆಗಳಿಗೆ ಧ್ವನಿಯಾಗಿ ಹಾಗು ಜನವರಿ 30, 2023  ರ ಉಭಯ ಜಿಲ್ಲೆಗಳ ಗ್ಯಾರೇಜ್ ಮಾಲಕರ ಮತ್ತು ಕಾರ್ಮಿಕರ ಸಮಾವೇಶದ ನಿರ್ಣಯಗಳನ್ನು ವಿಧಾನಮಂಡಲದಲ್ಲಿ ಪ್ರಸ್ತಾಪಿಸಿ  ಸರಕಾರದ ಗಮನ ಸೆಳೆದು ಸೂಕ್ತ ಉತ್ತರ ಪಡೆದು ಗ್ಯಾರೇಜ್ ಮಾಲಕರ ದಶಕಗಳ ಹೋರಾಟಕ್ಕೆ ಫಲಶ್ರತಿ ತಂದಿಟ್ಟ ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಮಾನಾಥ್ ಕೋಟ್ಯಾನ್ ರವರಿಗೆ ಅವರ ನಿವಾಸದಲ್ಲಿ ಅಭಿನಂದನೆ ಸಲ್ಲಿಸಲಾಗಿದೆ. 



ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗ್ಯಾರೇಜ್ ಮಾಲೀಕರ ಈ ಸಮಸ್ಯೆಯನ್ನು ಶಾಸಕ ಉಮನಾಥ್ ಕೋಟ್ಯಾನ್ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು. ಪರಿಣಾಮ ದಶಕಗಳ ಹೋರಾಟಕ್ಕೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಸಹಕಾರ ನೀಡಿದ್ದಾರೆ. ಈ ನಿಮಿತ್ತ ಶಾಸಕರಿಗೆ ಗ್ಯಾರೇಜ್ ಮಾಲೀಕರ ಸಂಘದ ಪ್ರಮುಖರು ಅವರ ನಿವಾಸಕ್ಕೆ ತೆರಳಿ ಗೌರವಾರ್ಪನೆ ಮಾಡಿದರು.

Post a Comment

0 Comments