ಅವೈಜ್ಞಾನಿಕ ರೀತಿಯ ವೃತ್ತ : ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ನಿಂದ ಪ್ರತಿಭಟನೆ
ಮೂಡುಬಿದಿರೆ-ಬಂಟ್ವಾಳ, ಮೂಡುಬಿದಿರೆ-ಧರ್ಮಸ್ಥಳಕ್ಕೆ ಬೇರ್ಪಡುವ ರಸ್ತೆಯ ಬಳಿ ಅವೈಜ್ಞಾನಿಕ ರೀತಿಯಲ್ಲಿ ವೃತ್ತವು ನಿರ್ಮಾಣಗೊಳ್ಳುತ್ತಿದೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಮಧ್ಯಾಹ್ನದ ವೇಳೆಗೆ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮೂಡುಬಿದಿರೆಯ ಅಭಿವೃದ್ಧಿಯ ಹರಿಕಾರ, ಸಮಾಜ ಮಂದಿರ, ಮಹಾವೀರ ಕಾಲೇಜು, ಜಿ.ವಿ.ಪೈ ಆಸ್ಪತ್ರೆಯ ಸ್ಥಾಪಕರಾಗಿರುವ ಎಸ್ .ಎನ್.ಮೂಡುಬಿದಿರೆ ಅವರ ಹೆಸರನ್ನು ವೃತ್ತಕ್ಕೆ ನಾಮಕರಣ ಮಾಡಬೇಕೆಂದು ಪುರಸಭೆಯಲ್ಲಿ ಚರ್ಚಿಸಲಾಗಿತ್ತು ಆದರೆ ಆಡಳಿತ ಪಕ್ಷದವರು ಬೇರೆ ಹೆಸರನ್ನು ಇಡುತ್ತಿದ್ದಾರೆಂದು ಆರೋಪಿಸಿದರು. ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸುತ್ತಿರುವ ವೃತ್ತವನ್ನು ಸರಿಪಡಿಸದಿದ್ದರೆ ಪಿಎಡ್ಬ್ಲೂ ಇಲಾಖೆಯ ಎದುರು ಧರಣಿ ಕುಳಿತುಕೊಳ್ಳುತ್ತೇವೆಂದು ಎಚ್ಚರಿಸಿದ ಜೈನ್
ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಮಾತನಾಡಿ ಕಳೆದ ಒಂದು ವಾರದಿಂದ ವೃತ್ತದ ಕಾಮಗಾರಿ ಆರಂಭಗೊಂಡಿದ್ದು ಅವೈಜ್ಞಾನಿಕ ರೀತಿಯಲ್ಲಿ ವೃತ್ತ ನಿರ್ಮಾಣವಾಗುತ್ತಿದೆ.ಧರ್ಮಸ್ಥಳ , ಬಂಟ್ವಾಳಕ್ಕೆ ಹೋಗುವ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇಲ್ಲಿ ಏನಾದರೂ ಅನಾಹುತ ನಡೆದರೆ ಅದಕ್ಕೆ ಪುರಸಭೆಯ ಆಡಳಿತವೇ ಕಾರಣ. ಎರಡು ದಿನಗಳಲ್ಲಿ ಇದನ್ನು ತೆಗೆದು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸದಿದ್ದರೆ ತಾವು ಬಿಡಲಾರೆವು ಎಂದು ಎಚ್ಚರಿಸಿದ ಅವರು ಎಸ್ .ಎನ್.ಮೂಡುಬಿದಿರೆಯ ಹೆಸರನ್ನು ವೃತ್ತಕ್ಕೆ ಇಡಬೇಕೆಂದು ನಾವು ಸೂಚಿಸಿದ್ದೆವು ಆದರೆಪುರಸಭೆಯ ಆಡಳಿತ ಪಕ್ಷದ ಹುನ್ನಾರದಿಂದ ಹೆಸರನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಿದರು.
ಪುರಸಭಾ ಸದಸ್ಯರಾದ ಕೊರಗಪ್ಪ, ಪಿ.ಕೆ.ತೋಮಸ್, ಜೊಸ್ಸಿ ಮಿನೇಜಸ್, ಸುರೇಶ್ ಪ್ರಭು, ಹಿಮಾಯುತ್ತುಲ್ಲಾ, ಪುರಂದರ ದೇವಾಡಿಗ, ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ ಮತ್ತಿತರರು ಭಾಗವಹಿಸಿದ್ದರು.
0 Comments