ಸಂಸದರು, ಶಾಸಕರ ಭಾವಚಿತ್ರವಿದ್ದ ಬ್ಯಾನರ್‌ಗೆ ಹಾನಿ:ಪ್ರಕರಣ ದಾಖಲು

ಜಾಹೀರಾತು/Advertisment
ಜಾಹೀರಾತು/Advertisment

 ಸಂಸದರು, ಶಾಸಕರ ಭಾವಚಿತ್ರವಿದ್ದ ಬ್ಯಾನರ್‌ಗೆ ಹಾನಿ:ಪ್ರಕರಣ ದಾಖಲು




ರಸ್ತೆ ಡಾಮರೀಕರಣಕ್ಕೆ 20 ಲಕ್ಷ ರೂಪಾಯಿ ಅನುದಾನ ನೀಡಿದ್ದರ ಬಗ್ಗೆ ಬಿಜೆಪಿ ಕಾರ್ಯಕರ್ತರು ಹಾಕಿದ್ದ ಬ್ಯಾನರ್ ಹರಿದು ವಿಕೃತಿ ಮೆರೆದ ಘಟನೆ ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಕೊಣಾಜೆ ಗ್ರಾಮದ ಉಂಜೆಬೆಟ್ಟು ಕಂಗಿನಡಿ ಪ್ರದೇಶದಲ್ಲಿ ನಡೆದಿದೆ.


ಈ ಪ್ರದೇಶದಲ್ಲಿ ಅಳವಡಿಸಿದ್ದ ಬ್ಯಾನರ್‌ನಲ್ಲಿ ಪಕ್ಷದ ಪ್ರಮುಖರ ಭಾವಚಿತ್ರವನ್ನು ಹಾಕಿದ್ದು ಇದನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ.  ಈ ಬಗ್ಗೆ ಕಠಿಣ ಕ್ರಮಕೈಗೊಳ್ಳುವಂತೆ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಲಾಗಿದೆ.


ಮೂಡುಕೊಣಾಜೆ ಹುಂಜೆಬೆಟ್ಟು ಬಳಿಯಿಂದ ಕಂಚಿಲೋಡಿ ರಸ್ತೆ ಕಾಂಕ್ರೀಟೀಕರಣಕ್ಕೆ 20ಲಕ್ಷ ರೂ. ಅನುದಾನ ಒದಗಿಸಿರುವುದಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಎ. ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಸಹಿತ ಪಕ್ಷದ ಪ್ರಮುಖರ ಭಾವಚಿತ್ರ ಇರುವ ಅಭಿನಂದನೆ ಬ್ಯಾನರ್ ಅಳವಡಿಸಿದ್ದರು.

Post a Comment

0 Comments