ನೆಲ್ಲಿಗುಡ್ಡೆಯಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ

ಜಾಹೀರಾತು/Advertisment
ಜಾಹೀರಾತು/Advertisment

 ಪುತ್ತಿಗೆ : ನೆಲ್ಲಿಗುಡ್ಡೆಯಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ 

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಲ್ಲಿಗುಡ್ಡೆ ಬಳಿ ರೂ 30 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕೆರೆ ಕಾಮಗಾರಿಗೆ  ಶಾಸಕ ಉಮಾನಾಥ್ ಎ.ಕೋಟ್ಯಾನ್ ಬುಧವಾರ ಸಂಜೆ  ಶಿಲಾನ್ಯಾಸ ನೆರವೇರಿಸಿದರು.



 ನಂತರ ಮಾತನಾಡಿದ ಅವರು ಮೂಲಭೂತ ಸೌಕರ್ಯವಾಗಿರುವ ನೀರು ಎಲ್ಲರಿಗೂ ಅವಶ್ಯಕವಾಗಿ ಬೇಕು. ಈ ಭಾಗದ ಜನರಿಗೆ ನೀರಿನ ಸಮಸ್ಯೆಯಿದ್ದು ಇದನ್ನು ಮನಗಂಡು ತನ್ನ ನಿಧಿಯಿಂದ ರೂ 25ಲಕ್ಷ ಹಾಗೂ ಪಂಚಾಯತ್ ನ 5 ಲಕ್ಷ ಅನುದಾನವನ್ನು ಬಳಸಿ ಕೆರೆಯನ್ನು ಅಭಿವೃದ್ಧಿ ಪಡಿಸಿ ನೀರಿನ ಸಮಸ್ಯೆಯನ್ನು ನೀಗಿಸಲಾಗುವುದು ಎಂದ ಅವರು ಪುರಸಭಾ ವ್ಯಾಪ್ತಿಗೆ ರೂ 66 ಕೋಟಿ ವೆಚ್ಚದಲ್ಲಿ ಹಾಗೂ ಗ್ರಾಮೀಣ ಭಾಗದ ಜನರಿಗೆ 24 ಗಂಟೆಗಳ ಕಾಲ ನೀರನ್ನು ಒದಗಿಸಬೇಕೆಂಬ ನಿಟ್ಟಿನಲ್ಲಿ ರೂ 145 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂದು ತಿಳಿಸಿದರು.

ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಪ್ರವೀಣ್ ಶೆಟ್ಟಿ, ಸದಸ್ಯರಾದ ಸುಮಾ ಭಟ್, ಚಂದ್ರಶೇಖರ್, ಸಾರಿಕಾ,ಪುರುಷೋತ್ತಮ ನಾಯಕ್, ಸೌಮ್ಯ, ಮಾಜಿ ಸದಸ್ಯರಾದ ನಾಗವರ್ಮ ಜೈನ್, ನಾಗರಾಜ ಕರ್ಕೇರಾ, ಶಶಿಧರ್ ಅಂಚನ್, ಬಿಜೆಪಿ ಮುಖಂಡರಾದ ಅಜೇಯ ರೈ, ಉದಯ ಶೆಟ್ಟಿ, ಪುತ್ತಿಗೆ ದೇವಸ್ಥಾನದ ಪವಿತ್ರಾ ಪಾಣಿ ಶಿವಪ್ರಸಾದ್ ಆಚಾರ್ಯ,ಪಿಡಿಒ ಭೀಮಾ ನಾಯ್ಕ್, ಗುತ್ತಿಗೆದಾರ ಪ್ರೇಮ್ ಉಪಸ್ಥಿತರಿದ್ದರು.


ಪುತ್ತಿಗೆ ಶ್ರೀರಾಮ ಮಂದಿರದ ಅರ್ಚಕ ನಾರಾಯಣ ಭಟ್ ಮತ್ತು ಪ್ರಸಾದ್ ಭಟ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಮಾಜಿ ಅಧ್ಯಕ್ಷ ಶಶಿಧರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments