ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನಾ ಕಾರ್ಯಕ್ರಮವು ಬುಧವಾರ ನಡೆಯಿತು.
ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ರೂ 20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಾಲಡ್ಕ ಆರೋಗ್ಯ ಕೇಂದ್ರದಲ್ಲಿ ಸಮುದಾಯ ಭವನ, ಪೂಪಾಡಿಕಲ್ಲು ಬಳಿ ನಿರ್ಮಾಣಗೊಂಡಿರುವ ಸ್ವಚ್ಛ ಸಂಕೀರ್ಣ ಘಟಕ, ಕಡಂದಲೆ ಪಲ್ಕೆಯಲ್ಲಿ ರೂ 8 ಲಕ್ಷದ ಜಿಮ್ ಕಟ್ಟಡ ಮತ್ತು ರೂ 10 ಲಕ್ಷದ ವಸತಿ ನಿಲಯ, ಎಸ್ ಸಿ, ಎಸ್ ಟಿ ಅನುದಾನದಲ್ಲಿ ರೂ 55 ಲಕ್ಷದಲ್ಲಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸೇನರಬೈಲು ರಸ್ತೆ ಉದ್ಘಾಟನೆ ಹಾಗೂ ರೂ ೨.೫ ಕೋಟಿ ವೆಚ್ಚದಲ್ಲಿ ಬಿ.ಟಿ ರೋಡ್ ಪೂಪಾಡಿಕಲ್ಲು ರಸ್ತೆ ಅಭಿವೃದ್ಧಿ ಶಿಲಾನ್ಯಾಸ ಹೀಗೆ ಒಟ್ಟು 3.58 ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ
ನಂತರ ಮಾತನಾಡಿದ ಅವರು ಮೂಡುಬಿದಿರೆ ಕ್ಷೇತ್ರದಲ್ಲಿ ೮೦% ರಷ್ಷು ರಸ್ತೆಗಳು ಕಾಂಕ್ರೀಟಿಕರಣ ಮತ್ತು ಅಗಲೀಕರಣಗೊಂಡು ಅಭಿವೃದ್ಧಿಯನ್ನು ಕಾಣುತ್ತಿದೆ. ಕ್ಷೇತ್ರವನ್ನು ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಕ್ಷೇತ್ರವನ್ನಾಗಿ ಮಾಡಲು ಎಲ್ಲಾ ಪ್ರಯತ್ನವನ್ನು ಮಾಡಲಾಗುತ್ತಿದೆ. ಅದಲ್ಲದೇ ಮೂಡುಬಿದಿರೆ ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೂರಕ್ಕೆ ನೂರು ಇರುವುದಿಲ್ಲ. ಕುಡಿಯುವ ನೀರಿಗಾಗಿ ಈಗಾಗಲೇ ಕೆಲಸ-ಕಾರ್ಯಗಳು ಆರಂಭಗೊಂಡಿದ್ದು, ದಿನದ ೨೪ ಗಂಟೆಗಳ ಕಾಲ ನೀರನ್ನು ಒದಗಿಸುವ ಕೆಲಸವನ್ನು ಮಾಡಲಾಗುವುದು ಎಂದರು.
ಕಳೆದ ೨೦-೩೦ ವರ್ಷಗಳಲ್ಲಿ ಆಗದ ಅಭಿವೃದ್ಧಿ ಕೆಲಸಗಳು ನಾಲ್ಕುವರೆ ವರ್ಷಗಳಲ್ಲಿ ಮಾಡಿದ್ದೇನೆ ಎಂಬ ಹೆಮ್ಮೆಯಿದೆ ಎಂದ ಅವರು ಅಭಿವೃದ್ಧಿಯಲ್ಲಿ ಯಾವುದೇ ರಾಜಕಾರಣ ಮಾಡದೇ ಪಕ್ಷ, ಜಾತಿ-ಧರ್ಮವನ್ನು ನೋಡದೇ ಎಲ್ಲರನ್ನೂ ಸಮಾನ ರೀತಿಯಲ್ಲಿ ಕಾಣಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ವಚ್ಛ ಸಂಕೀರ್ಣ ಘಟಕದ ನಿರ್ವಹಣೆಯ ಕೀ ಹಾಗೂ ವಾಹನದ ಕೀ ಯನ್ನು ಸಂಜೀವಿನಿ ತಂಡದ ಸದಸ್ಯರುಗಳಿಗೆ ಹಸ್ತಾಂತರಿಸಲಾಯಿತು.
ಕೆಎಂಎಫ್ ನ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ಪಾಲಡ್ಕ ಪಂಚಾಯತ್ ಅಧ್ಯಕ್ಷ ದಿನೇಶ್ ಕಾಂಗ್ಲಾಯಿ, ಉಪಾಧ್ಯಕ್ಷ ಸುಕೇಶ್ ಶೆಟ್ಟಿ, ಪಂಚಾಯತ್ ಸದಸ್ಯರುಗಳಾದ ಸುನೀತಾ ಶೆಟ್ಟಿ, ರೇಖಾ, ರಂಜಿತ್ ಭಂಡಾರಿ, ಕಾಂತಿ.ಯು ಶೆಟ್ಟಿ, ಅಮಿತಾ ನಾಗೇಶ್, ಹರಿಣಿ, ಸುಕೇಶ್ ಪೂಜಾರಿ ಶೆಡ್ಯಾ, ಮೋಹನ್, ಪಿಡಿಓ ರಕ್ಷಿತಾ, ತಾಲೂಕು ಪಂಚಾಯತ್ ಮಾಜಿ ಸದಸ್ಯ ರಮೇಶ್ ಪೂಜಾರಿ ಗುತ್ತಿಗೆದಾರರಾದ ತಿಮ್ಮಪ್ಪ ಮತ್ತು ಕಿರಣ್ ರೈ , ಬಿಜೆಪಿ ಮುಖಂಡ ಅಜಯ್ ರೈ,ಪಾಲಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ತ್ರಿವೇಣಿ, .
ಡಾ.ಸುಝಾನ,ಆಶಾ ಕಾರ್ಯಕರ್ತೆಯರು ಮತ್ತಿತರರು ಉಪಸ್ಥಿತರಿದ್ದರು.
ಪಂಚಾಯತ್ ಸದಸ್ಯ ಜಗದೀಶ್ ಕೋಟ್ಯಾನ್ ಸ್ವಾಗತಿಸಿದರು. ಸುರೇಶ್ ತಾರೆಬರಿ ಕಾರ್ಯಕ್ರಮ ನಿರೂಪಿಸಿದರು.
0 Comments