ಮೂಡುಬಿದಿರೆಯ ಸಾಹಸಿ ಉದ್ಯಮಿ ಹೃದಯಾಘಾತಕ್ಕೆ ಬಲಿ:ಎರಡೂ ಕೈಗಳಿಲ್ಲದೆ ಇವರು ಮಾಡಿದ ಸಾಧನೆ ಅಪಾರ.!
ಮೂಡುಬಿದಿರೆಯ ಉದ್ಯಮಿಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದವರ ಪೈಕಿ ಓರ್ವರಾದ ಜಿಕೆ ಎಂಟರ್ ಪ್ರೈಸಸ್ ನ ಗಣೇಶ್ ಕಾಮತ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಶಾಮಿಯಾನ, ಚಪ್ಪರ, ಲೈಟಿಂಗ್ಸ್ ಉದ್ಯಮದಲ್ಲಿ ಅಗ್ರಗಣ್ಯ ಸಾಧನೆ ಮಾಡಿದ ಇವರು ಮೂಡುಬಿದಿರೆ ಮಾತ್ರವಲ್ಲದೆ ರಾಜ್ಯದಲ್ಲೇ ಚಿರಪರಿಚಿತರು.
ಎರಡೂ ಕೈಗಳನ್ನು ಕಳೆದುಕೊಂಡು ಕೃತಕ ಕೈಗಳನ್ನು ಹೊಂದಿಕೊಂಡು ಉದ್ಯಮವನ್ನು ಮುಂದುವರಿಸಿದ್ದರು. ಮಾರ್ನಾಡು ಎಂಬ ಪ್ರದೇಶದಲ್ಲಿ ಜಿಕೆ ಗಾರ್ಡನ್ ಸಿಟಿ ಎಂಬ ಸಭಾಭವನ ನಿರ್ಮಿಸಿ ಅದರಲ್ಲೂ ಸಾಧನೆಗೈದವರು ಇವರು. ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಸಮರ್ಥ ಜವಬ್ಧಾರಿ ನಿರ್ವಹಿಸಿದ್ದು ಮಾತ್ರವಲ್ಲದೆ ಅನೇಕ ವಿಭಿನ್ನ ಕಾರ್ಯಗಳನ್ನು ನಡೆಸಿಯೂ ಸೈ ಎನಿಸಿಕೊಂಡಿದ್ದರು. ಇವರ ಅಗಲುವಿಕೆಗೆ ಉದ್ಯಮ ಸಮಾಜ ಕಂಬನಿ ಮಿಡಿದಿದೆ.

0 Comments