ಕಟೀಲು ಕ್ಷೇತ್ರಕ್ಕೆ ಕುಮಾರಸ್ವಾಮಿ ಅವಮಾನ.? ನಳಿನ್ ಕುಮಾರ್ ನಿಂದಿಸುವ ಭರದಲ್ಲಿ ಕ್ಷೇತ್ರದ ಹೆಸರನ್ನು ವ್ಯಂಗ್ಯವಾಡಿದ ಮಾಜಿ ಸಿಎಂ.!
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲು ಅವರ ಬಗ್ಗೆ ವ್ಯಂಗ್ಯವಾಡುವ ಭರದಲ್ಲಿ ತುಳುನಾಡಿನ ಪವಿತ್ರ ಪುಣ್ಯಕ್ಷೇತ್ರ ದುರ್ಗಾಪರಮೇಶ್ವರಿ ನೆಲೆನಿಂತ ಕಟೀಲು ದೇಗುಲಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಪಮಾನ ಎಸಗಿದ ಘಟನೆ ನಡೆದಿದೆ.
ನಳಿನ್ ಕುಮಾರ್ ಕಟೀಲು ಅವರನ್ನು ನಿಂದಿಸುವ ಭರದಲ್ಲಿ ಕಟೀಲು ಬದಲಾಗಿ ಪಿಟೀಲು ಎಂದು ಇಡಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿದ ಕುಮಾರಸ್ವಾಮಿಗೆ ಇದೀಗ ಮತ್ತೊಂದು ವಿವಾದ ಮೆತ್ತಿಕೊಡಿದೆ. ಕುಮಾರಸ್ವಾಮಿ ಹೇಳಿಕೆ ವಿರುದ್ಧ ಹಿಂದೂ ಧರ್ಮೀಯರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿ ಕಾರಿದ್ದಾರೆ.
0 Comments