ರಾಜ್ಯ, ರಾಷ್ಟ್ರೀಯ ನಾಯಕರನ್ನು ಸೆಳೆದ ಕಡಲ ತೀರದ ಬಿಜೆಪಿ ಕಾರ್ಯಕರ್ತರ ವಿಭಿನ್ನ ಪ್ರಚಾರ:ಮರಳಿನಲ್ಲಿ ಅರಳಿದ ಕಮಲ

ಜಾಹೀರಾತು/Advertisment
ಜಾಹೀರಾತು/Advertisment

 ರಾಜ್ಯ, ರಾಷ್ಟ್ರೀಯ ನಾಯಕರನ್ನು ಸೆಳೆದ ಕಡಲ ತೀರದ ಬಿಜೆಪಿ ಕಾರ್ಯಕರ್ತರ ವಿಭಿನ್ನ ಪ್ರಚಾರ:ಮರಳಿನಲ್ಲಿ ಅರಳಿದ ಕಮಲ



ಭಾರತೀಯ ಜನತಾ ಪಾರ್ಟಿಯ ರಾಜ್ಯದ ಮಟ್ಟದ ವಿಜಯ ಸಂಕಲ್ಪ ಅಭಿಯಾನ ಎಲ್ಲೆಡೆ ನಡೆಯುತ್ತಿದ್ದು ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ವ್ಯಾಪ್ತಿಯ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಈ ಅಭಿಯಾನವನ್ನು ವಿಭಿನ್ನವಾಗಿ ಆಚರಿಸಿದರು.


ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಸಮುದ್ರ ತೀರದ ಮರಳಿನಲ್ಲಿ "ಬಿಜೆಪಿ ಯುವಮೋರ್ಚಾ ಕಾಪು ವಲಯ, ಬಿಜೆಪಿ ಸಂಕಲ್ಪ ಅಭಿಯಾನ" ಎಂದು ಚಿತ್ರಿಸಿದ್ದಾರೆ. ಬಲಭಾಗದಲ್ಲಿ ಕಮಲದ ಚಿತ್ರ ನಿರ್ಮಿಸಿದ್ದು ಕೆಳಗೆ ಸದಸ್ಯತ್ವ ಅಭಿಯಾನದ ದೂರವಾಣಿ ಸಂಖ್ಯೆಯನ್ನು ಬರೆದಿದ್ದಾರೆ.


ಸದ್ಯ ಬಿಜೆಪಿ ಕಾರ್ಯಕರ್ತರ ಈ ವಿಭಿನ್ನ ಪ್ರಚಾರ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರನ್ನು ಸೆಳೆದಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಸಹಿತ ಅನೇಕ ನಾಯಕರು ಕಾರ್ಯಕರ್ತರ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Post a Comment

0 Comments