ಡಿಸಿ ಮನ್ನಾ ಜಾಗಗಳು ಇತರರ ಪಾಲಾಗುತ್ತಿದೆ. ,ಎಸ್. ಸಿ,ಎಸ್. ಟಿ ಸಮುದಾಯ ಅವಕಾಶ ಮಾಡಿಕೊಡಬೇಕೆಂದು ರಾಮಚಂದ್ರ ಕೆಂಬಾರೆ ಆಗ್ರಹ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ:ಡಿಸಿ ಮನ್ನಾ ಜಾಗಗಳು ಇತರರ ಪಾಲಾಗುತ್ತಿದೆ. ಆದರೆ ಎಸ್. ಸಿ,ಎಸ್. ಟಿ ಸಮುದಾಯದ ಜನರು ಡಿಸಿ ಮನ್ನಾ ಜಾಗದಲ್ಲಿ ಬಿಡಾರ ಹೂಡಿದರೆ ಕೂಡಲೇ ಅಲ್ಲಿಂದ ಎತ್ತಂಗಡಿ ಮಾಡಲು  ಇಲಾಖೆಯಿಂದ ಅಧಿಕಾರಿಗಳು ಬರುತ್ತಾರೆ.ಇನ್ನು ಮುಂದೆ ಡಿಸಿ ಮನ್ನಾ ಜಮೀನಿನಲ್ಲಿ ಎಸ್.ಸಿ, ಎಸ್.ಟಿ‌ ಸಮುದಾಯದ ಜನರು  ಸಣ್ಣ ಗುಡಿಸಲು ಮಾಡಿ ಮನೆ ಮಾಡಿಕೊಂಡಿದ್ದಾರೆ ಅವರನ್ನು ಅಲ್ಲಿಂದ ಓಡಿಸದೇ  ಅಸಹಾಯಕ ಜನರಿಗೆ ವಾಸ ಮಾಡಲು ಅವಕಾಶ ಮಾಡಿಕೊಡಬೇಕೆಂದು ರಾಮಚಂದ್ರ ಕೆಂಬಾರೆ ಆಗ್ರಹಿಸಿದ ಘಟನೆ ಎಸ್ ಸಿ ಮತ್ತು ಎಸ್ .ಟಿ ಸಭೆಯಲ್ಲಿ ನಡೆದಿದೆ.



 ಸ್ಕೌಟ್ಸ್ ಗೈಡ್ಸ್ ಕನ್ನಡಭವನದಲ್ಲಿ ತಾಲೂಕು ತಹಶಿಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು ಅಧ್ಯಕ್ಷತೆಯಲ್ಲಿ ನಡೆದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ  ಚರ್ಚೆ ನಡೆಯಿತು. ಪ.ಜಾತಿ&ಪ.ವರ್ಗದ  ಸಂಘ ಸಂಸ್ಥೆಗಳ ಕುಂದು ಕೊರತೆಗಳನ್ನು ಅಲಿಸಬೇಕಾದ ಹೆಚ್ಚಿನ ಇಲಾಖಾಧಕಾರಿಗಳು ಗೈರು ಹಾಜರಾಗಿದ್ದು, ಬೆರಳೆಣಿಕೆಯ ಅಧಿಕಾರಿಗಳಷ್ಟೇ ಹಾಜರಾಗಿದ್ದಾರೆ. ಜನಪ್ರತಿನಿಧಿಗಳಿಗೆ, ಸರಕಾರಿ ಅಧಿಕಾರಿಗಳಿಗೆ ಎಸ್.ಸಿ, ಎಸ್.ಟಿ ಕುಂದು ಕೊರತೆ ಸಭೆ ಎಂದರೆ ಅಷ್ಟೊಂದು ನಿರ್ಲಕ್ಷ್ಯವೇಕೆ? ಉಳಿದ ಸಭೆಗಳಿಗೆ ಓಡೋಡಿ ಬರುವ ಜನಪ್ರತಿನಿಧಿಗಳು ಪ.ಜಾತಿ&ಪ.ವರ್ಗದ ಜನರ ಕುಂದು ಕೊರತೆಗಳನ್ನು ಆಲಿಸಲು ಬರುವುದಿಲ್ಲ ಯಾಕೆ? ಇಲಾಖಾಧಿಕಾರಿಗಳೇ ಬಾರದಿದ್ದರೆ ನಮ್ಮ ಸಮಸ್ಯೆಗೆ ಪರಿಹಾರ ನೀಡುವವರು ಯಾರು? ಮಾಹಿತಿ ನೀಡುವವರು ಯಾರು? ಗೈರಾದ ಅಧಿಕಾರಿಗಳ ವಿರುದ್ಧ ಏನೂ ಕ್ರಮ ಕೈಗೊಳ್ಳುತ್ತೀರಿ? ಎಂದು ಪುರಸಭಾ ಸದಸ್ಯ ಕೊರಗಪ್ಪ ಅವರು ಸಭೆಯ ಅಧ್ಯಕ್ಷತೆ ವಹಿಸಿಕೊಂಡ ತಾಲೂಕು ತಹಶಿಲ್ದಾರ ಸಚ್ಚಿದಾನಂದ ಸತ್ಯಪ್ಪ ಕುಚನೂರು ಅವರಲ್ಲಿ ಪ್ರಶ್ನಿಸಿದರು.


ಈ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ತಹಶಿಲ್ದಾರ್ ಸಭೆಗೆ ಹಾಜರಾಗದೇ ಇರುವ ಸರಕಾರಿ ಅಧಿಕಾರಿಗಳಿಗೆ ನೋಟಿಸು ನೀಡಲಾಗುವುದು, ಅವರ ಗೈರು ಹಾಜರಿಯ ಉತ್ತರವನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದೆಂದು ತಿಳಿಸಿದ ಅವರು ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಮುಂದುವರಿದು ಮಾತನಾಡಿದ ಕೊರಗಪ್ಪ ಅವರು ಮೂಡುಬಿದಿರೆ ತಾಲೂಕಾಗಿ ಘೋಷಣೆಯಾಗಿ ಇಷ್ಟು ಸಮಯಗಳಾದರೂ ಸಮಾಜ ಕಲ್ಯಾಣ ಇಲಾಖೆ ಮೂಡುಬಿದಿರೆಯಲ್ಲಿ ಯಾಕಾಗಿಲ್ಲ? ಇಲ್ಲಿನ‌ವರು ಯಾವುದೇ ಅರ್ಜಿಗಳನ್ನು ಸಲ್ಲಿಸಬೇಕಾದರೆ ಮಂಗಳೂರುವರೆಗೆ ಹೋಗಬೇಕಾಗುತ್ತದೆ. ಸಮಾಜ ಕಲ್ಯಾಣ ಇಲಾಖೆಯು  ಮೂಡುಬಿದಿರೆಯಲ್ಲಿಯೂ ಆಗುವಂತೆ ಸರಕಾರದ ಗಮನಕ್ಕೆ ತರಬೇಕೆಂದ ಅವರ ಸಲಹೆಗೆ , ಸಮಾಜಕಲ್ಯಾಣ ಇಲಾಧಿಕಾರಿ ಕೆ ಸುರೇಶ್ ಪ್ರತಿಕ್ರಿಯಿಸಿ ಈ ವ್ಯವಸ್ಥೆ ಸರ್ಕಾರದ ಹಂತದಲ್ಲಿ ನಡೆಯಬೇಕಾಗಿರುವ ವ್ಯವಸ್ಥೆಯಾಗಿರುವುದರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ನೀಲಯ್ಯ ಅವರು ಮಾತನಾಡಿ ಪ.ಜಾತಿ&ಪ.ಪಂಗಡದ ಜನರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರಕಾರಿ ಜಾಗದಲ್ಲಿ ಮನೆಕಟ್ಟಿ ಕುಳಿತವರಿಗೆ ಡಿ-ನೋಟಿಸ್ ನೀಡಿಲ್ಲ. ಎಂದ ಅವರು  ಗ್ರಾಮ ಲೆಕ್ಕ ಅಧಿಕಾರಿಗಳು, ಪಿಡಿಓಗಳು ರಾಜಕೀಯ ವ್ಯಕ್ತಿಗಳ ಗುಲಾಮರಾಗಿ ಕಾರ್ಯ ನಿರ್ವಹಿಸುತ್ತಾ ದಲಿತರನ್ನು ಶೋಷಣೆ ಮಾಡುತ್ತಿದ್ದಾರೆಂದು ಆರೋಪಿಸಿದರು.

ಮಾರ್ಪಾಡಿಯ ಗಾಂಧಿನಗರ ಕಡೆಪಲ್ಲ ನಿವಾಸಿ ತುಳಸಿ ಅವರ ಮನೆ ನಿರ್ಮಾಣಕ್ಕಾಗಿ ಅಧಿಕಾರಿಗಳು ರಸ್ತೆ ಹತ್ತಿರವೆಂದು ಮನೆ ನಿರ್ಮಿಸಲು ತಡೆಯೊಡ್ಡಿದ್ದು, ಸುಮಾರು 20-30 ವರುಷಗಳಿಂದ ಮನೆಯು ಯಥಾಸ್ಥಿತಿಯಲ್ಲಿದ್ದು ಮನೆಮಂದಿ ,‌ಅಲ್ಲಿನ ಪ.ಜಾತಿ & ಪ.ಪಂಗಡದ ಕುಟುಂಬಗಳು ಕಷ್ಟಪಡುವಂತಾಗಿದೆ ಇದರ ಕುರಿತು ಸೂಕ್ತ ಕ್ರಮ‌ಕೈಗೊಂಡು ಅವರಿಗೆ ಪರಿಹಾರ ಒದಗಿಸಿ‌ ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದರು.

ಪ.ಪಂಗಡದ ರಾಮಚಂದ್ರ ಕೆಂಬಾರೆ ಮಾತನಾಡಿ ದಕ್ಷಿಣ ಕನ್ನಡದಲ್ಲಿ ಪ.ಜಾತಿ/ಪ.ಪಂಗಡದ ಜನರು ನಡೆಸುವಂತಹ ಯಾವುದೇ ಶಿಕ್ಷಣ ಸಂಸ್ಥೆ, ಬ್ಯಾಂಕ್, ಸೊಸೈಟಿಗಳಿಲ್ಲ, ಉತ್ತಮರೆಲ್ಲರೂ ಉದ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿದ್ದಾರೆ ಆ ಸಾಮರ್ಥ್ಯ ಎಸ್.ಸಿ, ಎಸ್.ಟಿ ಸಮುದಾಯಕ್ಕಿಲ್ಲವೇ? ತಾಲೂಕಿನಲ್ಲಿ ಸಾವಿರಕ್ಕೂ ಹೆಚ್ಚು ಸರ್ಕಾರಿ ಜಾಗಗಳಿದ್ದು ತಹಶಿಲ್ದಾರರು ಜಮೀನನ್ನು  ಒದಗಿಸಿ ಕೊಟ್ಟಲ್ಲಿ ನಮ್ಮವರು ಉದ್ಯಮವನ್ನು ನಡೆಸಲು ಶಕ್ತರಾಗಿದ್ದೇವೆ. ಪ.ಜಾತಿ & ಪ.ಪಂಗಡದವರಿಗೂ ಅವಕಾಶ ಮಾಡಿ ಕೊಡುವಂತೆ ತಹಶಿಲ್ದಾರರ ಬಳಿ ಬೇಡಿಕೆ ಇಟ್ಟರು.


ತಾಲೂಕು ಕಾರ್ಯನಿರ್ವಾಹಣಾಧಿಕಾರಿ ದಯಾವತಿ.ಎಂ ಹಾಗೂ ವಿವಿಧ ಇಲಾಖೆಯ ಇಲಾಧಿಕಾರಿಗಳು ಪ.ಜಾತಿ & ಪ.ಪಂಗಡದ ಜನರು ಈ ಸಂದರ್ಭದಲ್ಲಿದ್ದರು.

Post a Comment

0 Comments