ಕುರಿಯ ಪ್ರತಿಷ್ಠಾನದ ರಜತ ಸಂಭ್ರಮದ ತಾಳಮದ್ದಳೆ ಸಪ್ತಾಹ

ಜಾಹೀರಾತು/Advertisment
ಜಾಹೀರಾತು/Advertisment

 ಕುರಿಯ ಪ್ರತಿಷ್ಠಾನದ ರಜತ ಸಂಭ್ರಮದ ತಾಳಮದ್ದಳೆ ಸಪ್ತಾಹ




ಮೂಡುಬಿದಿರೆ: ಕುರಿಯ ವಿಠಲ ಶಾಸ್ತಿç ಸಾಂಸ್ಕೃತಿಕ ಪ್ರತಿಷ್ಠಾನದ ರಜತ ಮಹೋತ್ಸವದಂಗವಾಗಿ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಬ್ರಹ್ಮಾನಂದ ಸದನದಲ್ಲಿ ಶ್ರೀರಾಮಾಯಣ ದರ್ಶನಂ ತಾಳಮದ್ದಳೆಯ ಸಪ್ತಾಹವನ್ನು ಮಂಗಳವಾರ ಉದ್ಘಾಟಿಸಲಾಯಿತು. 

ದೇವಳದ ಆಡಳಿತ ಮೊಕ್ತೇಸರ ರಘುನಾಥ ವಿ.ಎಲ್ ಸಪ್ತಾಹವನ್ನು ಉದ್ಘಾಟಿಸಿದರು. ಯಕ್ಷಗಾನ ನಮ್ಮಲ್ಲಿ ಧಾರ್ಮಿಕ, ಸಾಂಸ್ಕೃತಿಕ ಪ್ರಜ್ಞೆ ಮೂಡಿಸುತ್ತದೆ ಎಂದು 

ರಾಜ್ಯ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. 

ಸಪ್ತಾಹದ ನೇತೃತ್ವ ವಹಿಸಿರುವ ಕಲಾವಿದ ಉಜಿರೆ ಅಂೆÆÃಕ ಭಟ್ ಮಾತನಾಡಿ, ಕುರಿಯ ವಿಠಲ ಶಾಸ್ತಿçಯವರ ಹೆಸರಿನಲ್ಲಿ 1998ರಲ್ಲಿ ಸ್ಥಾಪನೆಯಾದ ಸಾಂಸ್ಕೃತಿಕ ಪ್ರತಿಷ್ಠಾನದ ರಜತ ಸಂಭ್ರಮ ವರ್ಷದಲ್ಲಿ ಇಡೀ ಕರ್ನಾಟಕದಲ್ಲಿ ನೂರು ತಾಳಮದ್ದಳೆ ಕೂಟಗಳನ್ನು ನಡೆಸಲು ಉದ್ದೇಶಿಸಿದ್ದು ಅಭಿಮಾನಿಗಳ ಸಹಕಾರದಿಂದ 125ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತಾಳಮದ್ದಳೆ ಕೂಟಗಳು ಸಂಯೋಜಿಸಲ್ಪಟ್ಟಿವೆ ಎಂದರು. 

ಅಶ್ವತ್ಥಪುರ ದೇವಸ್ಥಾನದ ಅರ್ಚಕ ಪ್ರಭಾಕರ ಭಟ್, ಉದ್ಯಮಿ ಎ.ಕೆ.ರಾವ್, ಕಿನ್ನಿಗೋಳಿ ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಯಕ್ಷ ಚೈತನ್ಯ, ಯಕ್ಷ ಮೇನಕಾದ ನೆಲ್ಲಿಮಾರು ಸದಾಶಿವರಾವ್ ಉಪಸ್ಥಿತರಿದ್ದರು.

Post a Comment

0 Comments