ಕಸ ಎಸೆದ ಲಾರಿಯ ಬೆನ್ನತ್ತಿ ಹಿಡಿದ ಗ್ರಾಮ ಪಂಚಾಯತಿ ಸದಸ್ಯರು: ಕಸ ಹೆಕ್ಕಿ ಮತ್ತೆ ಲಾರಿಯಲ್ಲಿ ತುಂಬಿಸಿದ ಡ್ರೈವರ್
ಲಾರಿಯಲ್ಲಿದ್ದ ಕಸವನ್ನು ರಸ್ತೆ ಬದಿ ಎಸೆದು ಹೋಗಿದ್ದ ಲಾರಿಯನ್ನು ಬೆನ್ನಟ್ಟಿ ಹಿಡಿದು ಆತನಿಂದಲೇ ಕಸ ಹೆಕ್ಕಿಸಿದ ಘಟನೆ ಮೂಡುಬಿದಿರೆಯ ನೆಲ್ಲಿಕಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಾಮುಂಡಿ ದೈವಸ್ಥಾನದ ಬಳಿ ನಡೆದಿದೆ.
ಬೋರುಗುಡ್ಡೆ ಚಾಮುಂಡಿ ದೈವಸ್ಥಾನದ ಬಳಿ ಸಾಗರ ಮೂಲದ ಲಾರಿಯಿಂದ ಕಸ ಎಸೆದಿರುವುದನ್ನು ಕಂಡು ಗ್ರಾಮ ಪಂಚಾಯತಿ ಸದಸ್ಯರಾದ ಜಯಂತ ಹೆಗ್ಡೆ, ಉದಯ ಪೂಜಾರಿ ಮತ್ತು ಸ್ಥಳೀಯರು ಸೇರಿ ಹೊಸ್ಮಾರುವರೆಗೆ ಲಾರಿಯನ್ನು ಬೆನ್ನಟ್ಟಿದರು.
ಲಾರಿಯನ್ನು ವಾಪಾಸು ಕರೆ ತಂದು ಕಸವನ್ನು ಮತ್ತೆ ಅದೇ ಲಾರಿಗೆ ತುಂಬಿಸಿ ಚಾಲಕನಿಗೆ ಸ್ವಚ್ಚತೆಯ ಬುದ್ದಿ ಹೇಳಿ ಕಳಿಸಿಕೊಡಲಾಯಿತು. ಈ ಹಿಂದೆಯೂ ಇಂತಹ ಪ್ರಕರಣಗಳು ನಡೆದಿದ್ದು ಗ್ರಾಮ ಪಂಚಾಯತಿ ಸದಸ್ಯರು ಮತ್ತು ಸ್ಥಳೀಯರು ವಾಹನಗಳ ಮೇಲೆ ನಿಗಾ ಇರಿಸಿದ್ದರು.
0 Comments