ಗ್ರಾಮ ಪಂಚಾಯತಿ ನೌಕರರ ಪರವಾಗಿ ನಿಂತ ಸಚಿವ ಕೋಟ:ಬೇಡಿಕೆ ಈಡೇರಿಕೆಯ ಭರವಸೆ

ಜಾಹೀರಾತು/Advertisment
ಜಾಹೀರಾತು/Advertisment

 ಗ್ರಾಮ ಪಂಚಾಯತಿ ನೌಕರರ ಪರವಾಗಿ ನಿಂತ ಸಚಿವ ಕೋಟ:ಬೇಡಿಕೆ ಈಡೇರಿಕೆಯ ಭರವಸೆ



ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಗ್ರಾಮ ಪಂಚಾಯತಿ ನೌಕರರು ನಡೆಸುತ್ತಿದ್ದ ಪ್ರತಿಭಟನೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಂದಿಸಿದ್ದಾರೆ.


ದೆಹಲಿ ಪ್ರವಾಸದಲ್ಲಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗ್ರಾಮ ಪಂಚಾಯತಿ ನೌಕರರ ಪ್ರತಿಭಟನೆಯ ವಿಚಾರ ತಿಳಿದು ಕೂಡಲೇ ಬೆಂಗಳೂರಿಗೆ ಆಗಮಿಸಿದ್ದಾರೆ. ನೇರವಾಗಿ ನೌಕರರ ಬಳಿಗೆ ತೆರಳಿ ಮಾತುಕತೆ ನಡೆಸಿದ್ದಾರೆ. ಮಾತ್ರವಲ್ಲದೆ ಖುದ್ದು ಮುಖ್ಯಮಂತ್ರಿಗಳನ್ನು ಭೇಟಿಯಾಗಿಸಿ ಮಾತುಕತೆ ನಡೆಸಿದ್ದಾರೆ.


ನಂತರ ನೌಕರರ ಸಂಘದ ಪ್ರಮುಖರು ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆಗೆ ಸಭೆ ನಡೆಸಿ ಗ್ರಾಮ ಪಂಚಾಯತಿ ನೌಕರರ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿದ ಸಚಿವರು ಗ್ರಾಮ ಪಂಚಾಯತಿ ನೌಕರರ ಎಲ್ಲಾ ಬೇಡಿಕೆಗಳನ್ನು ಬಗೆಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

Post a Comment

0 Comments