ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದು ಪಿಎಂ ಕುಸುಮ್-ಬಿ ಯೋಜನೆ ರಾಜ್ಯದಾದ್ಯಂತ ರೈತರಿಗೆ ರಿಯಾಯಿತಿ ದರದಲ್ಲಿ ಸೋಲಾರ್ ಪಂಪ್‌ಸೆಟ್ ವಿತರಿಸಲಿದೆ.
ಕೇಂದ್ರ ಸರ್ಕಾರದಎಂ ಕುಸುಮ್ ಬಿ ಯೋಜನೆ ರಾಜ್ಯಾದ್ಯಂತ ರೈತರಿಗೆ ರಿಯಾಯಿತಿ ದರದಲ್ಲಿ ಸೋಲಾರ್ ಪಂಪ್ ಸೆಟ್ ವಿತರಣೆಗೆ ಮುಂದಾಗಿದೆ. ರೈತರಿಗೆ ನೀಡುವ ಪ್ರತಿ ಸೋಲಾರ್ ಪಂಪ್ ಸೆಟ್ ತೋಟಗಾರಿಕೆ ಇಲಾಖೆ ಶೇ.50ರಷ್ಟು ಸಬ್ಸಿಡಿಯನ್ನು ಆಯ್ಕೆ ಮಾಡಿಲ್ಲ.
ಸೌರಶಕ್ತಿಯ 3 ಹೆಚ್ ಪಿ ಸೋಲಾರ್ ಪಂಪ್ ನ ಬೆಲೆ 2 ರಿಂದ 2.50 ಲಕ್ಷ ರೂ. 5 ಹೆಚ್ ಪಿ ಸೋಲಾರ್ ಪಂಪ್ ನ ಬೆಲೆ ಸುಮಾರು 3 ರಿಂದ 3.50 ಲಕ್ಷ ರೂ. ಇದೆ. ಇಷ್ಟು ಹಣ ಕೊಟ್ಟು ಖರೀದಿಸಲು ರೈತರಿಗೆ ಆಗುವುದಿಲ್ಲ ಪ್ರಸಕ್ತ ವರ್ಷದಿಂದ ರೈತರಿಗೆ ಸೋಲಾರ್ ಪಂಪ್ ಸೆಟ್ ಖರೀದಿಸಲು ಶೇ. 50ರಷ್ಟು ಸಬ್ಸಿಡಿಯನ್ನು ತೋಟಗಾರಿಕೆ ಇಲಾಖೆ ನೀಡಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದವರಿಗೆ ಏಕ ರೀತಿಯ ಅನುದಾನ ಸಿಗಲಿದೆ.
0 Comments