ಹೊಸ ವರ್ಷದ ಆರಂಭವನ್ನು ವಿಶೇಷ ಮಕ್ಕಳಿಗೆ ಧನಸಹಾಯ ನೆರವು ನೀಡಿ ಮಾದರಿಯಾದ ವಿದ್ಯಾರ್ಥಿನಿಯರು ಹಾಗೂ ಟೈಲರ್ ಮಹಿಳೆಯರು

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ:ಸಾಮಾನ್ಯವಾಗಿ ಯುವಜನತೆ ಹೊಸ ವರ್ಷದ ಆರಂಭದಲ್ಲಿ ತಾವು ಪಾರ್ಟಿ ಮಾಡ್ಬೇಕೆಂದು ದೂರದ ಊರಿಗೆ ಟ್ರಿಪ್ ಹೋಗುವುದು, ಪಬ್, ಬೀಚ್‌ಗಳಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿಕೊಂಡು ತಮ್ಮದೇ ಆದ ಲೋಕದಲ್ಲಿ ತೇಲಾಡುತ್ತಿರುತ್ತಾರೆ. ಆದರೆ ಇಲ್ಲೊಂದು ಪುಟ್ಟ ತಂಡವೊಂದು ತಮ್ಮ ಸ್ವಇಚ್ಛೆಯಿಂದ ಮೂಡುಬಿದಿರೆಯಲ್ಲಿರುವ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಹಾಗೂ ತರಬೇತಿ ಕೇಂದ್ರಕ್ಕೆ ಈ ಹೊಸ ವರುಷದ ಆರಂಭದ ಮೊದಲ ದಿನದಂದು ತಮ್ಮ ಅಕ್ಕ-ಪಕ್ಕದ ಊರುಗಳ ಮನೆ-ಮನೆಗಳನ್ನು ಸುತ್ತಾಡಿ ವಿಶೇಷ ಮಕ್ಕಳಿಗಾಗಿ ಸುಮಾರು 10, 650 ರೂಪಾಯಿಗಳನ್ನು ಸಂಗ್ರಹಿಸಿ ಹಸ್ತಾಂತರಿಸಿದ್ದಾರೆ.

ಅವರೇ ಮೂಡುಬಿದಿರೆ ವ್ಯಾಪ್ತಿಯ ಕಲ್ಲಬೆಟ್ಟುವಿನ ಪ್ರೀತಿ, ವಸಂತಿ ಎಂಬ ಇಬ್ಬರು ಟೈಲರ್‌ಗಳು ಹಾಗೂ ಮಹಾವೀರ ಕಾಲೇಜಿನ ಪ್ರಥಮ ಪಿಯುಸಿಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಗಳಾದ ತ್ರಿಶಾ, ತುಶಿತಾ ಇವರುಗಳು ತಮ್ಮ ಸ್ವ ಇಚ್ಛೆಯಿಂದ ಮುಂದೆ ಬಂದು ತಮ್ಮ ಕೈಯಲಾಗುವಷ್ಟು ಧನಸಹಾಯ ಮಾಡಬೇಕೆಂಬ ನಿಟ್ಟಿನಲ್ಲಿ ಆಸಕ್ತಿಯನ್ನು ತೋರಿ ವಿಶೇಷ ಮಕ್ಕಳ ಶಾಲೆಗೆ ಬಂದಿರುವ ಮೊತ್ತವನ್ನು  ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಹಾಗೂ ತರಬೇತಿ ಕೇಂದ್ರದ ಸಂಸ್ಥಾಪಕ ಪ್ರಕಾಶ್.ಜೆ ಶೆಟ್ಟಿಗಾರ್ ಅವರಿಗೆ ನೀಡಿದ್ದಾರೆ.

ಮಹಾವೀರ ಕಾಲೇಜಿನ ವಿದ್ಯಾರ್ಥಿನಿಯರು ಇಬ್ಬರು ತಾವು ದುಡಿಯದಿದ್ದರೂ ತಮ್ಮಿಂದ ಆದಷ್ಟು ವಿಶೇಷ ಮಕ್ಕಳಿಗೆ ನೆವಾಗಬೇಕೆಂಬ ಆಸಕ್ತಿಯಿಂದ ಮೊತ್ತವನ್ನು ಸಂಗ್ರಹಿಸಿ ನೀಡುವ ಮೂಲಕ ತಮ್ಮ ಖುಷಿಯನ್ನು ಕಂಡುಕೊAಡಿದ್ದಾರೆ. ತಮ್ಮಂತೆ ಮಕ್ಕಳಾಗಿರುವ ವಿಶೇಷ ಮಕ್ಕಳಿಗೆ ನೆರವಾಘಭೇಕೆಂಬ ಇವರ ನಿಲುವು ಎಲ್ಲರಿಗೂ ಪ್ರೇರಣೆ.

Post a Comment

0 Comments