*ಕಲಿಕಾ ಹಬ್ಬ ಮಕ್ಕಳ ಸಮಗ್ರ ಪ್ರಗತಿಗೆ ಪೂರಕ: ಪ್ರಸಾದ್ ಕುಮಾರ್*
ಮೂಡುಬಿದಿರೆ: ಕಳೆದ ಎರಡು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಆದ ಕಲಿಕಾ ದೋಷಗಳನ್ನು ಸರಿಪಡಿಸುವ ದೃಷ್ಟಿಯಿಂದ ಕಲಿಕಾ ಹಬ್ಬವನ್ನು ಅನುಷ್ಠಾನಕ್ಕೆ ತರಲಾಗಿದೆ. ಇದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಾಯಕವಾಗಿದೆ. ಮಕ್ಕಳ ಪ್ರಗತಿಗೆ ಪೂರಕವಾಗಿದೆ ಎಂದು ಮೂಡುಬಿದಿರೆ ಪುರಸಭೆಯ ಅಧ್ಯಕ್ಷ ಪ್ರಸಾದ್ ಕುಮಾರ್ ಹೇಳಿದರು.
ಅವರು ಮೂಡುಬಿದಿರೆ ಮೈನ್ ಕ್ಲಸ್ಟರ್ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.ಕರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ. ಎಂ. ಸಿ. ಅಧ್ಯಕ್ಷೆ ಮಮತಾ ಅವರು ವಹಿಸಿದ್ದರು.ಪುರಸಭೆಯ ಸದಸ್ಯರಾದ ಪುರಂದರ ದೇವಾಡಿಗ,ಮಮತಾ,ಕ್ಷೇತ್ರ ಸಮನ್ವಯ ಅಧಿಕಾರಿ ಸೌಮ್ಯ, ಶಿಕ್ಷಣ ಸಂಯೋಜಕ ನಂದಿಕೂರು ರಾಜೇಶ್ ಭಟ್, ಕಲಿಕಾ ಹಬ್ಬದ ಉಸ್ತುವಾರಿ ಪಡು ಕೊಣಾಜೆ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಸುನೀತಾ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುಜಾತ, ಸಿ. ಆರ್. ಪಿ, ನಾಗರತ್ನ ಶಿರೂರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್. ನಾಗೇಶ್, ಕಲಿಕಾ ಹಬ್ಬದ ಸಂಪನ್ಮೂಲ ವ್ಯಕ್ತಿಗಳಾದ ಸುರೇಂದ್ರ ಪೂಜಾರಿ, ನಿರ್ಮಲ,ಭವ್ಯ, ಪದ್ಮ, ರೂಪ, ಲಕ್ಷ್ಮಿ , ಫ್ಲಾವಿಯ, ವಿವಿಧ ಶಾಲೆಯ ಆಧ್ಯಾಪಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ಈ ಕಲಿಕಾ ಹಬ್ಬ ನಡೆಯಲಿದೆ.
0 Comments