ಮೂಡುಬಿದಿರೆಯಲ್ಲಿ ಭಾವೈಕ್ಯತಾ ಜಾಥಾ

ಜಾಹೀರಾತು/Advertisment
ಜಾಹೀರಾತು/Advertisment

ಮೂಡುಬಿದಿರೆ: ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಸ್ತೆ, ಚರಂಡಿ ಬಗ್ಗೆ ಮಾತನಾಡ್ಬೇಡಿ ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಹೇಳ್ತಾರೆ. ಅದರ ಅರ್ಥ ಏನೆಂದರೆ ಬಿ.ಜೆ.ಪಿ ಶಾಸಕರು, ಸಚಿವರುಗಳು ಈ ದೇಶದ, ರಾಜ್ಯ, ಜಿಲ್ಲೆಯ ಮೂಲಭೂತ ಸಮಸ್ಯೆಗಳ ಬೆಲೆ ಏರಿಕೆಯನ್ನು ಅವರಿಂದ ತಡೆಯಲಾಗುತ್ತಿಲ್ಲ, ಕೋಟ್ಯಾಂತರ ರೂಪಾಯಿ ಕಾಮಗಾರಿ, ಭ್ರಷ್ಟಚಾರಗಳನ್ನು ಮಾಡುವ ಮೂಲಕ  ಜನರ ಸಮಸ್ಯೆಯನ್ನು ಬಗೆಹರಿಸಲಾಗದೇ ಜನರ ನಡುವೆ ಭಾವನಾತ್ನಕ ವಿಷಯಗಳಾದ ಲವ್ ಜಿಹಾದ್, ಗೋಹತ್ಯೆಯಂತಹ ಭಾವನಾತ್ಮಕ ವಿಷ ಬೀಜವನ್ನು ಬಿತ್ತುವ ಕೆಲಸ ಈ ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದರು.

ಅವರು ಶುಕ್ರವಾರ ಮಂಗಳೂರು ಬಾವುಟಗುಡ್ಡೆಯಲ್ಲಿರುವ ರೈತ ಹೋರಾಟಗಾರರ ಕೆದಂಬಾಡಿ ರಾಮಯ್ಯ ಗೌಡ ಪುತ್ಥಳಿಯ ಬಳಿಯಿಂದ ಇಂದಿನಿದ ಆರಂಭವಾದ ಜನಾಂದೋಲನಾಗಳ ಮಹಾಮೈತ್ರಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೊಳಿಸಿದ ಭೂಸ್ವಾಧೀನ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ, ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್ ಮಸೂದೆ ಕಾಯ್ದೆಯನ್ನು ಹಿಂಪಡಯಬೇಕೆಂದು ಸಂಯುಕ್ತ ಹೋರಾಟ-ಕರ್ನಾಟಕದ ಸಹಕಾರದೊಂದಿಗೆ ಶೋಷಿತರ ಅರಿವಿನ ಗುರು ಕುದ್ಮುಲ್ ರಂಗರಾವ್ ಸ್ಮರಣೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ  ಜನವರಿ 11ರಂದು ಬೆಂಗಳೂರು ಸ್ವಾತಂತ್ರ್ಯಉದ್ಯಾನವನ್ನು ತಲುಪಿ ಅಲ್ಲಿ ನಡೆಯಲಿರುವ  ಭಾವೈಕ್ಯತಾ ಜಾಥ-2023 ಜಾಥವು ಶುಕ್ರವಾರ ಸಂಜೆ ೩ ಗಂಟೆಗೆ ಮೂಡುಬಿದಿರೆ ಬಸ್ ನಿಲ್ದಾಣವನ್ನು ಪ್ರವೇಶಿಸಿತ್ತು.

ಇತ್ತಿಚೆಗೆ ಮೂಡುಬಿದಿರೆಯಲ್ಲಿ ವಕೀಲರಾದ ಶಾಂತಿಪ್ರಸಾದ್ ಅವರ ನೇತೃತ್ವದಲ್ಲಿ ರೈತರನ್ನು ಒಟ್ಟುಗೂಡಿಸಿ  ಡೀಮ್ಡ್ ಫಾರೆಸ್ಟ್ನ್ನು ತೆಗೆದುಹಾಕಬೇಕೆಂದು ಬೃಹತ್ ಮಟ್ಟದಲ್ಲಿ ಹೋರಾಟವನ್ನು ನಡೆಸಿದ್ದಾರೆ. ಆದರೆ ಶಾಂತಿಪ್ರಸಾದ್‌ರವರೇ ನಿಮ್ಮದೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಇರುವುದು. ಆದರೆ ಸುಪ್ರೀಂಕೋರ್ಟಿನ ಅನುಮತಿ ಇಲ್ಲದೇ ಡೀಮ್ಡ್ ಫಾರೆಸ್ಟ್ನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಜನಸಾಮಾನ್ಯರಿಗೆ ಸುಳ್ಳು ಭರವಸೆ ನೀಡಿ ಜನರಿಗೆ ಮೋಸ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ಇವತ್ತು ಆಡಳಿತದಲ್ಲಿರುವ ಡಬ್ಬಲ್ ಇಂಜಿನ್ ಸರ್ಕಾರವು ಸಿಂಗಲ್ ಪಿಸ್ಟನ್ ಸರ್ಕಾರವಾಗಿದೆ. ಇಂಜಿನ್ 2 ಇದೆ ಪಿಸ್ಟನ್ ಒಂದಿದೆ. ಸಿಂಗಲ್ ಪಿಸ್ಟನ್ ಸರ್ಕಾರಕ್ಕೆ ತಾಕತ್ತು ಇಲ್ಲ.ಇಂದು ನರೇಂದ್ರ ಮೋದಿ ಹಾಗೂ ಬೊಮ್ಮಾಯಿ ಅವರ ಸದ್ದು ಮಾತ್ರ ಕೇಳಿಸುತ್ತಿದೆ. ಆದರೆ ಅದ್ಯಾವುದೂ ಜನರಿಗೆ ಅನುಕೂಲವಾಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತಸಂಘದ ಮೂಡುಬಿದಿರೆ ತಾಲೂಕು ಅಧ್ಯಕ್ಷ ಲಿಯೋ ವಾಲ್ಟರ್ ನಜ್ರತ್ ಅಧ್ಯಕ್ಷತೆ ವಹಿಸಿದ್ದರು.

ಜೆ.ಸಿ.ಟಿ.ಯು ನ ರಾಜ್ಯಸಂಚಾಲಕ ಕೆ.ವಿ ಭಟ್, ಜಮಾತೆ ಇಸ್ಲಾಮೀ ಹಿಂದ್‌ನ ಜಿಲ್ಲಾ ಸಂಚಾಲಕ ಅಮೀನ್ ಆಹ್ಲತ್, ಶಿವಪ್ರಕಾಶ್, ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ  ಬಿ.ಯಂ. ಭಟ್, ಯುವ ರೈತ ಘಟಕದ ಜಿಲ್ಲಾಧ್ಯಕ್ಷ ಆದಿತ್ಯನಾರಾಯಣ್ ಕೆಲ್ಲಾಜೆ, ಸೋಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ಜಿಲ್ಲಾಧ್ಯಕ್ಷ ತಸ್ಲೀಲಾ ಅಹಮ್ಮದ್, ಎ.ಐ.ಟಿ.ಯು.ಸಿ.ಸಿ ಯ ಜಿಲ್ಲಾ ಮುಖಂಡ ರಾಮಣ್ಣ ವಿಟ್ಲ, ಯುವ ರೈತ ಘಟಕದ ಜಿಲ್ಲಾ ಗೌರವಾಧ್ಯಕ್ಷ ಸುರೇಂದ್ರ ಕೇರ್ಯ ಈ ಸಂದರ್ಭದಲ್ಲಿದ್ದರು.

Post a Comment

0 Comments