ಮೂಡುಬಿದಿರೆ : ಇಲ್ಲಿನ ಸ್ವರಾಜ್ಯಮೈದಾನದಲ್ಲಿರುವ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ 46 ನೇ ವರ್ಷದ ದೀಪಾರಾಧನೆ ಹಾಗು ದೇವರ ಪ್ರತಿಷ್ಠಾ ವರ್ಧಂತಿ ಬಿಜೆಪಿ ಜಿಲ್ಲಾಧ್ಯಕ್ಷ, ಕ್ಷೇತ್ರದ ಗುರುಸ್ವಾಮಿ ಸುದರ್ಶನ ಎಂ.ರವರ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು. ಬೆಳಿಗ್ಗೆ ಶ್ರೀ ಅಯ್ಯಪ್ಪ ದೇವರಿಗೆ ತುಪ್ಪ, ಭಸ್ಮ, ಪನ್ನೀರಾಭಿಷೇಕ, ನವಕಪ್ರಧಾನ, ಅನ್ನದಾನ, ಹಾಗು ರಾತ್ರಿ ಪುಷ್ಪಾಭಿಷೇಕ, ಪಡಿಪೂಜೆ, ಅಪ್ಪ ಸೇವೆ, ದೀಪಾರಾಧನೆ, ಯಕ್ಷಗಾನ ಬಯಲಾಟ, ಕೆಂಡಸೇವೆ ನಡೆಯಿತು. ಕ್ಷೇತ್ರದ ಸ್ಥಾಪಕರು ಗುರುಸ್ವಾಮಿ ದಿ.ರಮೇಶ್ ಶಾಂತಿಯವರ ಸ್ಮರಣಾರ್ಥ ಗುರುಸ್ವಾಮಿ ಸುದರ್ಶನ ಎಂ.ರವರು ಕ್ಷೇತ್ರದ 50 ಮಂದಿ ವೃತಾಧಾರಿಗಳ ಶಬರಿಮಲೆ ಯಾತ್ರೆಗೆ ಉಚಿತ ಬಸ್ ವ್ಯವಸ್ಥೆಯ ಸೇವೆಯನ್ನು ನೀಡಿರುತ್ತಾರೆ. ಅರ್ಚಕ ಗುರುಸ್ವಾಮಿ ಶಿವಾನಂದ ಶಾಂತಿ, ಸಮಿತಿಯ ಪ್ರಮುಖರಾದ ಎಸ್.ವಾಸು, ರಘುನಾಥ್ ಶೆಟ್ಟಿ, ವಿಶ್ವನಾಥ ದೇವಾಡಿಗ, ಕಿಶೋರ್ ಕುಮಾರ್, ರಮೇಶ್, ಕೇಶವ ಉಪಸ್ಥಿತರಿದ್ದರು*.
0 Comments