ಜನವರಿ.22 : ಜಿಲ್ಲಾ ಮಟ್ಟ್ಚದ ರಸ್ತೆ ಸುರಕ್ಷತೆ ಮತ್ತು ವಾಹನ ಚಾಲನಾ ಕೌಶಲ್ಯ ಸ್ಪರ್ಧೆ
ಮೂಡುಬಿದಿರೆ: ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಜಿಲ್ಲೆ 317 ಡಿಸೆಂಬರ್ ಜಿಲ್ಲಾ ರಾಜ್ಯಪಾಲರ ಕಾರ್ಯಕ್ರಮದಡಿ, ಜಿಲ್ಲಾ ಮಟ್ಟ್ಚದ ರಸ್ತೆ ಸುರಕ್ಷತೆ ಮತ್ತು ವಾಹನ ಚಾಲನೆ ಕೌಶಲ್ಯ ಸ್ಪರ್ಧೆಯು ಜ 22 ರಂದು ಭಾನುವಾರ ಬೆಳಿಗ್ಗೆ 9.30 ಕ್ಕೆ ಶ್ರೀ ಮಹಾವೀರ ಕಾಲೇಜಿನ ಜಿ.ವಿ.ಪೈ. ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದುಲಯನ್ಸ್ ಜಿಲ್ಲಾ ರಸ್ತೆ ಸುರಕ್ಷತೆ ಕಾರ್ಯಕ್ರಮಗಳ ಸಂಯೋಜಕ ಶಿವಪ್ರಸಾದ್ ಹೆಗ್ಡೆ ಎಂಜೆಎಫ್ ತಿಳಿಸಿದ್ದಾರೆ. ಅವರು ಬುಧವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದಿನೇ ದಿನೇ ಹೆಚ್ಚಾಗುತ್ತಿರುವ ರಸ್ತೆ ಅಪಘಾತದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಹಾಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಏರ್ಪಡಿಸಲಾಗಿದೆ. ಲಯನ್ಸ್ ಜಿಲ್ಲಾ ರಾಜ್ಯಪಾಲ ಸಂಜೀತ್ ಶೆಟ್ಟಿ ಉದ್ಘಾಟಿಸಲಿದ್ದು ಮಂಗಳೂರು ಉಪಪೋಲಿಸ್ ಆಯುಕ್ತರಾದ ಬಿ.ಪಿ. ದಿನೇಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಜಿಲ್ಲಾ ರಸ್ತೆ ಸುರಕ್ಷತೆ ಕಾರ್ಯಕ್ರಮಗಳ ಸಂಯೋಜಕ ಶಿವಪ್ರಸಾದ್ ಹೆಗ್ಡೆ ಎಂಜೆಎಫ್ ಅವರು ವಹಿಸಲಿದ್ದಾರೆ.
ಅತಿಥಿಗಳಾಗಿ ಲಯನ್ಸ್ ಮಲ್ಟಿಪಲ್ ಚೆಯರಮ್ಯಾನ್, ವಸಂತ ಕುಮಾರ್ ಶೆಟ್ಟಿ ಉಪರಾಜ್ಯಪಾಲರು ಡಾ. ಮೆಲ್ವಿನ್ ಡಿಸೋಜ ಮತ್ತು ಭಾರತಿ ಬಿ.ಎಂ. ಜಿಲ್ಲಾ ಸಂಪುಟದ ಕಾರ್ಯದರ್ಶಿ ಪಿ.ವಿ. ಅನಿಲ್ ಕುಮಾರ್ ಹಾಗೂ ಲಯನ್ಸ್ ಕ್ಲಬ್ ನ ಇನ್ನಿತರ ಪದಾಧಿಕಾರಿಗಳು ಭಾಗವಹಿಸಿದ್ದಾರೆ.
ಲಯನ್ಸ್ ಜಿಲ್ಲಾ ರಸ್ತೆ ಸುರಕ್ಷತೆ ಕಾರ್ಯಕ್ರಮಗಳ ಸಂಯೋಜಕ ಶಿವಪ್ರಸಾದ್ ಹೆಗ್ಡೆ ಎಂಜೆಎಫ್ ಮಾಹಿತಿ ನೀಡಿ ಕಾರ್ಯಾಗಾರ ಕೌಶಲ್ಯ ಸ್ಪರ್ಧೆ
ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ಕಾರ್ಯಗಾರವನ್ನು ನಡೆಸಲಾಗುವುದು ಮತ್ತು ಲಘು ಮೋಟಾರು ವಾಹನ ಚಾಲಕರುಗಳಿಗೆ 'ಹಿಮ್ಮುಖ ಚಾಲನೆ ಕೌಶಲ್ಯ ಸ್ಪಧೆ'ð, ದ್ವಿಚಕ್ರ ವಾಹನ ಸವಾರರಿಗೆ 'ನಿಧಾನಗತಿಯ ಚಾಲನೆ ಕೌಶಲ್ಯ ಸ್ಪರ್ಧೆ' ಮತ್ತು ಮಕ್ಕಳಿಗೆ 'ನಿಧಾನಗತಿಯ ಸೈಕಲ್ ಸವಾರಿ ಕೌಶಲ್ಯ ಸ್ಪರ್ಧೆ' ಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಥಳದಲ್ಲಿ ನೋಂದಾಣಿ ನಡೆಸುವ ವಾಣಿಜ್ಯ ಉದ್ದೇಶದ ವಾಹನಗಳ ಚಾಲಕರಿಗೆ ಲಯನ್ಸ್ ವತಿಯಿಂದ ರೂ ೧ ಲಕ್ಷದ ವಿಮೆ ಪಾಲಿಸಿಯನ್ನು ನೀಡುವುದಾಗಿ ಘೋಷಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷರಾದ ದಿನೇಶ್ ಎಂ.ಕೆ, ಕಾರ್ಯದರ್ಶಿ ಆರ್.ಎಂ. ಹೆಗ್ಡೆ, ಕೋಶಾಧಿಕಾರಿ ಹರೀಶ್ ತಂತ್ರಿ, ವಲಯ ಅಧ್ಯಕ್ಷರಾದ ಮೆಲ್ವಿನ್ ಡಿಕೋಸ್ತ ಸದಸ್ಯರುಗಳಾದ ವೆಂಕಟೇಶ್ ಪ್ರಭು, ಉಪಸ್ಥಿತರಿದ್ದರು.
0 Comments