ಮೂಡುಬಿದಿರೆ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 20ಕ್ಕಿಂತಲೂ ಅಧಿಕ ಅಕ್ರಮ ಕಸಾಯಿಖಾನೆಗಳಿದ್ದು , ಪೊಲೀಸರು ಈ ಅಕ್ರಮ ಕಸಾಯಿಖಾನೆಯ ವಿರುದ್ಧ ಯಾವುದೇ ಕಾನೂನು ಕ್ರಮವನ್ನು ಜರಗಿಸದೆ ಅಕ್ರಮ ಗೋವುಗಳ ಕಸಾಯಿಖಾನೆಯನ್ನು ನಡೆಸುವವರಿಗೆ ಸಹಕಾರವನ್ನು ನೀಡುತ್ತಿದ್ದು ಈ ಬಗ್ಗೆ ಉಗ್ರ ಹೋರಾಟವನ್ನು ಮಾಡುವುದಾಗಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ್ ಸಮಿತ್ ರಾಜ್ ದರೆಗುಡ್ಡೆ ಎಚ್ಚರಿಕೆ ನೀಡಿದ್ದಾರೆ.
ಅವರು ಮೂಡುಬಿದಿರೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋವುಗಳ ಅಕ್ರಮ ಕಳ್ಳ ಸಾಗಾಣೆ ಮತ್ತು ಅಕ್ರಮ ಕಸಾಯಿಖಾನೆ ದಂಧೆಯ ಬಗ್ಗೆ ವಿರೋಧಿಸಿ ಮಂಗಳವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಇತ್ತೀಚೆಗೆ ಮೂಡುಬಿದಿರೆಯ ಅಲಂಗಾರಿನ ಆಶ್ರಯ ಕಾಲನಿಯಲ್ಲಿ ಗಿಲ್ಬಟ್ ೯ ಮಿರಾಂದ ಗಿಲ್ಬಟ್ ೯ ಮಿರಾಂದ ಅವರ ಮನೆಯಲ್ಲಿ ನಡೆಯುತ್ತಿದ್ದ ಗೋವುಗಳ ಅಕ್ರಮ ಕಸಾಯಿಖಾನೆಗೆ ದಾಳಿ ಮಾಡಿ ಪೊಲೀಸರಿಗೆ ನಾವೇ ಮಾಹಿತಿಯನ್ನು ನೀಡಿರುತ್ತೇವೆ. ಪೊಲೀಸರು ಗಿಲ್ಬಟ್೯ ಮಿರಾಂದ ಅವರ ಜಮೀನನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ಅನೇಕ ಗೋವುಗಳು ಹತ್ಯೆಯಾಗಿರುವ ಬಗ್ಗೆ ಅವಶೇಷಗಳು ಕಂಡು ಬಂದಿರುತ್ತದೆ. ಈ ರೀತಿಯಾಗಿ ದೊಡ್ಡ ಮಟ್ಟದಲ್ಲಿ ಗೋವುಗಳ ಅಕ್ರಮ ಕಸಾಯಿಖಾನೆಗಳು ನಡೆಯುತ್ತಿರುವ ವಿಚಾರ ಪೊಲೀಸರ ಗಮನಕ್ಕೆ ಬಂದಿದ್ದರೂ ಕೂಡಾ ಮೂಡುಬಿದಿರೆ ಪೊಲೀಸರು ಕ್ರಮಕೈಗೊಂಡಿರುವುದಿಲ್ಲ.ಇಂತಹ ಹಲವು ಪ್ರಕರಣಗಳು ಮೂಡುಬಿದಿರೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು ಇದರಿಂದಾಗಿ ಶಾಂತಿ ಸೌಹಾರ್ದಕ್ಕೆ ಮತ್ತು ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ.
ಆಲಂಗಾರಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಸಾಯಿಖಾನೆಯು ಪೊಲೀಸ್ ಠಾಣೆಯಿಂದ ಕೇವಲ ಐದು ಕಿ.ಮೀ.ದೂರದಲ್ಲಿದ್ದು ಪೊಲೀಸರ ಗಮನಕ್ಕೆ ಬಾರದೇ ಇರುವುದು ವಿಪರ್ಯಾಸವಾಗಿದೆ. ಅಲ್ಲದೆ ಗಂಟಾಲ್ ಕಟ್ಟೆ, ಬೆಳುವಾಯಿ, ನೀರಲ್ಕೆ ಮತ್ತು ಹಂಡೇಲಿನಲ್ಲಿಯೂ ನಿರಂತರವಾಗಿ ಅಕ್ರಮಕಸಾಯಿಖಾನೆ ನಡೆಯುತ್ತಿದ್ದು ಈ ಬಗ್ಗೆ ಪೊಲೀಸರು ಕಾನೂನು ಕ್ರಮಕೈಗೊಳ್ಳದೆ ಇದ್ದಲ್ಲಿ ಸಂಘಟನೆಯ ಮೂಲಕ ಉಗ್ರ ಹೋರಾಟವನ್ನು ಮಾಡಲು ಸಿದ್ಧವಾಗಿದ್ದೇವೆ ಎಂದು ಹೇಳಿದರು.
ಹಿಂಜಾವೇಯ ತಾಲೂಕು ಪ್ರಧಾನ ಕಾರ್ಯದರ್ಶಿ ಸಂದೀಪ್ ಕೆಲ್ಲಪುತ್ತಿಗೆ, ತಾಲೂಕು ಸಂಚಾಲಕ ಸಂದೀಪ್ ಹೆಗ್ಡೆ, ಹಿಂದೂ ಜಾಗರಣ ವೇದಿಕೆಯ ಪ್ರಮುಖ್ ಪ್ರಶಾ.ತ್ ಕೆಂಪುಗುಡ್ಡೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
0 Comments