ಬೃಹತ್ ಸ್ವಚ್ಛತಾ ಅಭಿಯಾನ ಸಮಾಪ್ತಿ 225 ಕಿ.ಮೀ ದೂರವನ್ನು ಸ್ವಚ್ಛ ಮಾಡಿದ ವಿದ್ಯಾರ್ಥಿಗಳು

ಜಾಹೀರಾತು/Advertisment
ಜಾಹೀರಾತು/Advertisment

  

ಮೂಡುಬಿದಿರೆ: ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಭಾಗವಾಗಿ ದ.ಕ ಜಿಲ್ಲಾ ಪಂಚಾಯತ್ ಮಂಗಳೂರು ಇದರ ವತಿಯಿಂದ ನಮ್ಮ ಸಂಸ್ಕೃತಿ - ಸ್ವಚ್ಛ ಸಂಸ್ಕೃತಿ " ಪರಿಕಲ್ಪನೆಯಡಿ ಭಾರತ್ ಸೌಟ್ಸ್-ಗೈಡ್ಸ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ಮೂಡುಬಿದಿರೆ ಪುರಸಭೆಯ ಸಹಯೋಗದಲ್ಲಿ ನಡೆದ  ಬೃಹತ್ ಸ್ವಚ್ಛತಾ ಅಭಿಯಾನವು ಸೋಮವಾರ ಸ್ವರಾಜ್ಯ ಮೈದಾನದಲ್ಲಿ ಸಮಾಪ್ತಿಗೊಂಡಿತು. ಜಾಂಬೂರಿಯ ಎರಡನೇಯ ದಿನದಿಂದ ಆರಂಭಗೊಂಡು‌ 8ಕಡೆಗಳಲ್ಲಿ ಸುಮಾರು 9೦೦೦ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು ಸಹಿತ  ಇನ್ನಿತರ ಸ್ವಯಂಸೇವಕರು ಸ್ವಚ್ಛತಾ ಕಾರ್ಯ ಕೈಗೊಂಡು ಭಾನುವಾರ ಮೂಡುಬಿದಿರೆ ಪುರಸಭಾ ವ್ಯಾಪ್ತಿಗೆ ತಲುಪಿದ್ದರು.

ಭಾನುವಾರ ಮತ್ತು ಸೋಮವಾರದಂದು  ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ನಡೆಸಲಾಯಿತು.

ನಂತರ ಸ್ವರಾಜ್ಯ ಮೈದಾನದಲ್ಲಿ ನಡೆದ ಸಮಾರೋಪ ಸಭೆಯಲ್ಲಿ  ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಮಾತನಾಡಿ  ನಮ್ಮ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಯಾಗಿ ಬಳಸುವುದನ್ನು ಧ್ಯೇಯವಾಗಿಟ್ಟುಕೊಳ್ಳಬೇಕು. ಪ್ಲಾಸ್ಟಿಕ್ ಬದಲಾಗಿ ನೈಸರ್ಗಿಕಯುತವಾದ ಬಟ್ಟೆ, ಕೈಚೀಲ, ಹಾಳೆ ತಟ್ಟೆ, ಬೌಲ್ ಗೆರಟೆಗಳನ್ನು ಬಳಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು ದೂರದ ಊರುಗಳಿಂದ ಬಂದು ಮೂಡುಬಿದಿರೆ ಪುರಸಭೆಯ ವ್ಯಾಪ್ತಿಯನ್ನು ಸ್ವಚ್ಛಗೊಳಿಸಿದ ರೀತಿಯಲ್ಲಿಯೇ ನಿಮ್ಮ ನಿಮ್ಮ ಊರುಗಳಲ್ಲಿಯೂ ಇಂತಹ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳುವಂತೆ ಕರೆ ನೀಡಿದರು.

 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ,  ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು 10 ಬಾರಿ ಮಾಡಿದರೂ ಈ ಸಮಸ್ಯೆಗೆ ಪರಿಹಾರವಿಲ್ಲ. ಆದರಿಂದ ಪ್ಲಾಸ್ಟಿಕ್‌ನ್ನು ಬಳಸುವುದನ್ನು ಆದಷ್ಟು ಕಡಿಮೆಗೊಳಿಸಿದರೆ ತ್ಯಾಜ್ಯವು ಕಡಿಮೆಯಾಗುತ್ತದೆ ಎಂದ ಅವರು ಸ್ವಚ್ಛತೆ ಎಂದರೆ ಹೊರಗಿನ ಪ್ರದೇಶವನ್ನು ಮಾತ್ರ ಸ್ವಚ್ಛಗೊಳಿಸುವುದಲ್ಲ ಬದಲಾಗಿ  ನಮ್ಮೊಳಗಿನಿಂದಲೂ ಸ್ವಚ್ಛತೆಯನ್ನು ಬೆಳೆಸಿಕೊಳ್ಳಬೇಕೆಂದರು.

 ಪುರಸಭಾ ಸದಸ್ಯೆ ಶ್ವೇತಾ ಕುಮಾರಿ, ಪುರಸಭಾ ಮುಖ್ಯಾಧಿಕಾರಿ ಇಂದು.ಎಂ,ಪರಿಸರ ಅಭಿಯಂತರೆ ಶಿಲ್ಪಾ,   ಸ್ಕೌಟ್ಸ್ ಗೈಡ್ಸ್ ನ  ಜಿಲ್ಲಾ ತರಬೇತಿ ಆಯುಕ್ತೆ ಜಯಶ್ರೀ,  ಸ್ವಚ್ಛತಾ ಅಭಿಯಾನದ ನೇತೃತ್ವ ವಹಿಸಿದ್ದ ಪ್ರಾಂಶುಪಾಲ ಡಾ. ಕುರಿಯನ್, ಜವನೆರ್ ಬೆದ್ರ ಸಂಘದ ಅಧ್ಯಕ್ಷ ಅಮರ್ ಕೋಟೆ, ಅಕ್ಷಯ್ ಕುಮಾರ್, ಸುಧಾಕರ್ ಪೂಂಜಾ 

ಹಾಗೂ ವಿವಿಧ ಶಾಲೆಯ ಸ್ಕೌಟ್ಸ್-ಗೈಡ್ಸ್ನ ಮಾರ್ಗದರ್ಶಕರುಗಳು, ತರಬೇತುದಾರರು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿದ್ದರು. ವಿದ್ಯಾರ್ಥಿಗಳ ಜತೆಗೆ ಗ್ರಾಮ ಪಂಚಾಯತ್ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸ್ಥಳೀಯ ಶಾಲಾ ಕಾಲೇಜುಗಳ ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ಸ್ವಯಂಸೇವಕರು ಹಾಗೂ ಸಾರ್ವಜನಿಕರು ಸ್ವಚ್ಛತೆಯಲ್ಲಿ ಭಾಗವಹಿಸಿದರು. 

ನೇತ್ರಾವತಿ ತಂಡದ 650 ವಿದ್ಯಾರ್ಥಿಗಳು ಹಾಗೂ ಇನ್ನಿತರ ಸ್ಥಳೀಯರನ್ನೊಳಗೊಂಡ  ವಾಮಂಜೂರಿನಿಂದ ಗುರುಪುರದವರೆಗೆ ರಸ್ತೆಯ ಇಕ್ಕೆಲಗಳನ್ನು,  

ಶರಾವತಿ ತಂಡ ಕಾರ್ಕಳದ 8 ರಸ್ತೆಗಳಲ್ಲಿ ಸ್ವಚ್ಚತೆ ಕೈಗೊಂಡ ಶರಾವತಿ ತಂಡದ 250 ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು, ಭುವನೇಂದ್ರ ಕಾಲೇಜಿನ 150 ಎನ್‌ಎಸ್‌ಎಸ್ ಸ್ವಯಂಸೇವಕರು ದಾನ ಶಾಲೆ, ಗ್ಯಾಸ್ ಗೋಡೌನ್, ಆನೆಕೆರೆ, ಮೂರುಮಾರ್ಗ, ಸಾಣೂರು, ಪುಲ್ಕೇರಿ, ಅನಂತಶಯನ ರಸ್ತೆಗಳಲ್ಲಿ ಒಟ್ಟು ೫ ಕಿಮೀ ಸ್ವಚ್ಚತೆ ಹಮ್ಮಿಕೊಂಡಿತು. ಶಾಂಭವಿ ತಂಡ


Post a Comment

0 Comments