ಪುರಸಭೆ ಭರವಸೆ ಮೇರೆಗೆ ಹಿಂ.ಜಾ.ವೇ. ಬೃಹತ್ ಪ್ರತಿಭಟನೆ ಮುಂದೂಡಿಕೆ


ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಪ್ರಾಂತ ಗ್ರಾಮದಲ್ಲಿ ಕಾನೂನುಬಾಹಿರವಾಗಿ ಜರಾತುಲ್ ಕುರಾನ್ ಖುರಾನ್ ಫ್ರೀ ಸ್ಕೂಲ್ ಮತ್ತು ಆಲ್-ಮಾಫಾಸ್ ವುಮೆನ್ಸ್ ಷರೀಯತ್ ಕಾಲೇಜ್ ಅಕ್ರಮವಾಗಿ ನಡೆಯುತ್ತಿದ್ದ ಬಗ್ಗೆ ಕ್ರಮ ಕೈಗೊಳ್ಳುವಂತೆ ಮೂಡುಬಿದಿರೆಯ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಹಿಂದು ಜಾಗರಣ ವೇದಿಕೆಯಲ್ಲಿ ನಾಳೆ ಪ್ರತಿಭಟನೆಗೆ ಕರೆ ನೀಡಲಾಯಿತು. ಪ್ರತಿಭಟನೆಯ ಗಂಭೀರತೆಯನ್ನು ಅರಿತ ನಗರಸಭೆಯ ಅಧ್ಯಕ್ಷರು ಹಾಗೂ ಸದಸ್ಯರು ಹಿಂದು ಜಾಗರಣ ಪ್ರಾಂತ, ಜಿಲ್ಲಾ, ಹಾಗೂ ತಾಲೂಕು ಮುಖಂಡರು ಇಂದು ತುರ್ತು ಸಭೆ ಕರೆದು ಮಾತುಕತೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದ್ದು, ನಾಳೆ ಪ್ರತಿಭಟನೆಗೆ ಕರೆ ನೀಡಿದ್ದ ಹಿಂ.ಜಾ. ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

Post a Comment

0 Comments

Advertisement