ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

 

ಮೂಡುಬಿದಿರೆ: ಇಲ್ಲಿನ ಜೈನ ಪ.ಪೂ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ  ವಿದ್ಯಾರ್ಥಿನಿ ಸಂಗೀತಾ (17) ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಹೌದಾಲ್ ನಲ್ಲಿ ನಡೆದಿದೆ.

 ಬೈಲೂರು ಮೂಲದವಳಾಗಿರುವ ಈಕೆ ಹೌದಾಲ್ ನಲ್ಲಿರುವ ತನ್ನ ಚಿಕ್ಕಮ್ಮನ ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತಿದ್ದು,  ಮಂಗಳವಾರದಂದು ಮಧ್ಯಾಹ್ನದ ವೇಳೆಗೆ ಕಿವಿ ನೋವೆಂದು ಕಾಲೇಜ್ ನಿಂದ ಮನೆಗೆ ಹಿಂತಿರುಗಿದ್ದಳು. ಬುಧವಾರ ಬೆಳಿಗ್ಗೆ ಕಾಲೇಜಿಗೆ ಹೋಗುವುದಾಗಿ ಹೊರಟಿದ್ದ ಆಕೆ  ಮನೆಯ ಪಕ್ಕದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ಮನೆಯವರ ಗಮನಕ್ಕೆ ಬಂದಿದೆ.

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

0 Comments

Advertisement