ಉಚಿತ ಆರೋಗ್ಯ ತಪಾಸಣಾ ಶಿಬಿರ ಅಭಾ ಕಾರ್ಡ್ ನೋಂದಣಿ

ಜಾಹೀರಾತು/Advertisment
ಜಾಹೀರಾತು/Advertisment

  

ಮೂಡುಬಿದಿರೆ :ಆಧುನಿಕ ಆಹಾರ ಪದ್ಧತಿ ಹಾಗೂ ಜೀವನಶೈಲಿಯಿಂದಾಗಿ ಅನೇಕ ಮಾರಣಾಂತಿಕ ಖಾಯಿಲೆಗಳು ನಮಗರಿವಿಲ್ಲದಂತೆ ನಮ್ಮನ್ನು ಬಾಧಿಸುತ್ತಿವೆ. ನಿಯಮಿತವಾಗಿ ಸಾತ್ವಿಕ ಆಹಾರ ಸೇವನೆ, ದೈಹಿಕ ವ್ಯಾಯಮದಲ್ಲಿ ತೊಡಗಿದರೆ ಖಾಯಿಲೆಗಳು ದೂರವಾಗಬಹುದು. ಆಗಾಗ ವೈದ್ಯಕೀಯ ತಪಾಸಣೆ ನಡೆಸುವ ಮೂಲಕ ಕಾಯಿಲೆಯ ಬಗ್ಗೆ ಮುನ್ನಚ್ಚರಿಕೆ ವಹಿಸಬೇಕು ಎಂದು ಜೈನ್ ಮೆಡಿಕಲ್ ಸೆಂಟರ್ ಆಸ್ಪತ್ರೆಯ ನಿರ್ದೇಶಕಿ ಹಾಗೂ ವೈದ್ಯೆ ಡಾ| ಪ್ರಣಮ್ಯ ಜೈನ್ ಹೇಳಿದರು.

ಲಯನ್ಸ್ ಕ್ಲಬ್, ಬಾಂಧವ್ಯ ಮಹಿಳಾ ಸಂಘ ಹಾಗೂ ಜೈನ್ ಮೆಡಿಕಲ್ ಆಸ್ಪತ್ರೆಯ ಸಹಯೋಗದೊಂದಿಗೆ ಹುಡ್ಕೋ ಕಾಲನಿಯಲ್ಲಿ ಮಂಗಳವಾರ ನಡೆದ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ಅಭಾ ಕಾರ್ಡ್ ನೋಂದಣಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಅಭಾ ಕಾರ್ಡ್ ನೋಂದಣಿಯ ವ್ಯವಸ್ಥಾಪಕ ನಿತೇಶ್ ಕುಮಾರ್ ಕಾರ್ಡ್‌ನಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ದಿನೇಶ್ ಎಂ.ಕೆ. ಅಧ್ಯಕ್ಷತೆ ವಹಿಸಿದ್ದರು. ಶಿವಪ್ರಸಾದ್ ಹೆಗ್ಡೆ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ವಿವರ ನೀಡಿದರು.

ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಮೆಲ್ವಿನ್ ಡಿಕೋಸ್ತ, ಬಾಂಧವ್ಯ ಮಹಿಳಾ ಸಂಘದ ಅಧ್ಯಕ್ಷೆ ಸೌಮ್ಯ ರಶ್ಮಿತ್ ಶೆಟ್ಟಿ, ಪುರಸಭಾ ಸದಸ್ಯ ಕೊರಗಪ್ಪ ಭಾಗವಹಿಸಿದರು. ಹರೀಶ್ ತಂತ್ರಿ ಕಾರ‍್ಯಕ್ರಮ ನಿರ್ವಹಿಸಿದರು.

ಜೈನ್ ಮೆಡಿಕಲ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಮಹಾವೀರ ಜೈನ್ ಕಿವಿ, ಮೂಗು, ಗಂಟಲು ತಪಾಸಣೆ ನಡೆಸಿದರು.

Post a Comment

0 Comments