ನವದೆಹಲಿ: ಇನ್ನು ಮುಂದೆ ನವಜಾತ ಶಿಶುಗಳಿಗೆ ಜನನ ಪ್ರಮಾಣ ಪತ್ರದ ಜತೆಗೇ ಆಧಾರ್ ಕಾರ್ಡ್ ಕೂಡ ಲಭಿಸಲಿದ್ದು, ಆಧಾರ್ ನೋಂದಣಿ ಮಾಡುವ ಯೋಜನೆ ಶೀಘ್ರವೇ ಎಲ್ಲಾ ರಾಜ್ಯಗಳಿವೂ ವಿಸ್ತರಣೆಯಾಗಲಿದೆ. ಕಳೆದ ಒಂದು ವರ್ಷದಲ್ಲಿ 16 ರಾಜ್ಯಗಳಲ್ಲಿ ಜನನ ಪ್ರಮಾಣ ಪತ್ರಕ್ಕೆ ಆಧಾರ್ ಅನ್ನು ಲಿಂಕ್ ಮಾಡುವ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಪೈಕಿ ಕರ್ನಾಟಕವೂ ಸೇರಿದೆ. ಮುಂದಿನ ಕೆಲ ತಿಂಗಳುಗಳಲ್ಲಿ ಉಳಿದ ರಾಜ್ಯಗಳಿಗೂ ಈ ಯೋಜನೆ ವಿಸ್ತರಣೆಯಾಗಲಿದೆ
ನವದೆಹಲಿ: ಇನ್ನು ಮುಂದೆ ನವಜಾತ ಶಿಶುಗಳಿಗೆ ಜನನ ಪ್ರಮಾಣ ಪತ್ರದ ಜತೆಗೇ ಆಧಾರ್ ಕಾರ್ಡ್ ಕೂಡ ಲಭಿಸಲಿದ್ದು, ಆಧಾರ್ ನೋಂದಣಿ ಮಾಡುವ ಯೋಜನೆ ಶೀಘ್ರವೇ ಎಲ್ಲಾ ರಾಜ್ಯಗಳಿವೂ ವಿಸ್ತರಣೆಯಾಗಲಿದೆ. ಕಳೆದ ಒಂದು ವರ್ಷದಲ್ಲಿ 16 ರಾಜ್ಯಗಳಲ್ಲಿ ಜನನ ಪ್ರಮಾಣ ಪತ್ರಕ್ಕೆ ಆಧಾ ಅನ್ನು ಲಿಂಕ್ ಮಾಡುವ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಪೈಕಿ ಕರ್ನಾಟಕವೂ ಸೇರಿದೆ. ಮುಂದಿನ ಕೆಲ ತಿಂಗಳುಗಳಲ್ಲಿ ಉಳಿದ ರಾಜ್ಯಗಳಿಗೂ ಈ ಯೋಜನೆ ವಿಸ್ತರಣೆಯಾಗಲಿದೆ.
ಹಾಲಿ 5 ವರ್ಷದೊಳಗಿನ ಮಕ್ಕಳಿಗೆ ಬಯೋಮೆಟ್ರಿಕ್ಸ್ ಪಡೆಯುವುದಿಲ್ಲ. ಅದರ ಬದಲಾಗಿ ಅವರ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಭೌಗೋಳಿಕ ಮಾಹಿತಿ ಮತ್ತು ಮುಖದ ಫೋಟೋ ಆಧಾರದಲ್ಲಿ ನೋಂದಣಿ ಮಾಡಿ ಅದನ್ನು ಪೋಷಕರ ಯುಐಡಿ ಆಧಾರದಲ್ಲಿ ನಿರ್ವಹಿಸಲಾಗುತ್ತದೆ.
ಆದ್ದರಿಂದ, ಮಗುವಿಗೆ 5 ಮತ್ತು 15 ವರ್ಷ ತುಂಬಿದ ನಂತರ ಬಯೋಮೆಟ್ರಿಕ್ ಅಪ್ಡೇಟ್ ಅಗತ್ಯವಿದೆ. ಅಲ್ಲದೆ, ಯೋಜನೆ ಜಾರಿಗೆ ಬಂದಿರುವ 16 ರಾಜ್ಯಗಳಲ್ಲಿ ನವಜಾತ ಶಿಶುವಿನ ಜನನ ಪ್ರಮಾಣ ಪತ್ರ ವಿತರಣೆಯಾದ ಕೂಡಲೇ, ಈ ಕುರಿತ ಸಂದೇಶವು ವಿಶಿಷ್ಟ ಗುರುತಿನ ಸಂಖ್ಯೆ ವ್ಯವಸ್ಥೆಗೆ ಮಾಹಿತಿ ರವಾನೆಯಾಗುತ್ತದೆ. ಅಲ್ಲದೆ ಮಗುವಿನ ಹೆಸರಲ್ಲಿ ಹೊಸ ಗುರುತಿನ ಸಂಖ್ಯೆ ನೋಂದಣಿಯಾಗುತ್ತದೆ. ಬಳಿಕ ಮಗುವಿನ ಫೋಟೋ ಮತ್ತು ವಿಳಾಸವು ವ್ಯವಸ್ಥೆಗೆ ರವಾನೆಯಾದ ಕೂಡಲೇ ಆಧಾರ್ ಸಂಖ್ಯೆ ಕೂಡ ಸೃಷ್ಟಿಯಾಗುತ್ತದೆ.
0 Comments