ಸಚಿವರನ್ನು ಚಿತ್ರಮಂದಿರದಲ್ಲಿ ಸ್ವಾಗತಿಸಿದ ದೈವ ನರ್ತಕರು.! ಕಾಂತಾರ ಸಿನಿಮಾ ವೀಕ್ಷಿಸಿದ ಸಚಿವ ಕೋಟ ಏನೆಂದರು.?

ಜಾಹೀರಾತು/Advertisment
ಜಾಹೀರಾತು/Advertisment

ರಾಜ್ಯದ ಸಮಾಜ‌ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಇಂದು ಕುಂದಾಪುರದ ಕೋಟೇಶ್ವರದಲ್ಲಿರುವ ಭಾರತ್ ಸಿನಿಮಾ ಮಂದಿರದಲ್ಲಿ ಕಾಂತಾರ ಸಿನಿಮಾ ವೀಕ್ಷಿಸಿದರು.

ಸಿನಿಮಾ ಮಂದಿರಕ್ಕೆ ಆಗಮಿಸಿದ ಸಚಿವರನ್ನು ದೈವ ನರ್ತಕರು ಮತ್ತು ದರ್ಶನ ಪಾತ್ರಿಗಳು ಗುಲಾಬಿ ಹೂ ನೀಡಿ ಸ್ವಾಗತಿಸಿದರು. 


ಸುಮಾರು 120ಕ್ಕೂ ಅಧಿಕ ದೈವ ನರ್ತಕರು ಮತ್ತು ದರ್ಶನ ಪಾತ್ರಿಗಳ ಜೊತೆಗೆ ಸಚಿವರು ಕಾಂತಾರ ಸಿನೆಮಾ ನೋಡಿ ಸಂತಸ ಪಟ್ಟರು.

ಸಿನಿಮಾ ವೀಕ್ಷಣೆ ನಂತರ ಮಾತನಾಡಿದ ಸಚಿವರು ರಿಷಭ್ ಶೆಟ್ಟಿಯವರಿಗೆ ಅಭಿನಂದನೆ ಸಲ್ಲಿಸಿದರು. "ತುಳುನಾಡಿನ ದೈವಾರಾಧನೆ, ಕಂಬಳ, ಯಕ್ಷಗಾನ ಸಹಿತ ನಮ್ಮ ಕಲೆಯನ್ನು ಅಚ್ಚುಕಟ್ಟಾಗಿ ಪರದೆಯ ಮೇಲೆ ಬಿತ್ತರಿಸಿದ್ದಾರೆ. ಇಂತಹ ಉತ್ತಮ ಚಿತ್ರ ಇನ್ನಷ್ಟು ಮೂಡಿ ಬರಲಿ. ಇಂತಹ ವಿಭಿನ್ನ ಚಿತ್ರವನ್ನು ತೆರೆಮೇಲೆ ತಂದ ಹೊಂಬಾಳೆ ಪ್ರೊಡಕ್ಷನ್ ಹಾಗೂ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿಯವರ ತಂಡಕ್ಕೆ ಅಭಿನಂದನೆಗಳು" ಎಂದು ಸಚಿವರು ಹೇಳಿದರು.


ಸಚಿವರೊಂದಿಗೆ ಅವರ ಪತ್ನಿ, ಮಕ್ಕಳು ಹಾಗೂ ಸಚಿವರ ಆಪ್ತ ಸಹಾಯಕರು ಮತ್ತು ಸಿಬ್ಬಂದಿಗಳು ಚಿತ್ರ ವೀಕ್ಷಿಸಿದ್ದು ವಿಶೇಷವಾಗಿತ್ತು.

 

Post a Comment

0 Comments