ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಶೂನ್ಯ ತ್ಯಾಜ್ಯ ಕ್ಯಾಂಪಸ್ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಮೂಡುಬಿದಿರೆ ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜು ವತಿಯಿಂದ ಶೂನ್ಯ ತ್ಯಾಜ್ಯ ಕ್ಯಾಂಪಸ್ ಉದ್ಘಾಟನಾ ಕಾರ್ಯಕ್ರಮವನ್ನು ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸಿದರು.

ನಂತರ ಆರ್ಶೀವಾಚಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳೇ ಸ್ವಯಂಸೇವಕರಾಗಿ ಸ್ವಚ್ಛತೆಯನ್ನು ಕಾಪಡುವ ಕೆಲಸವನ್ನು ಮಾಡಬೇಕು. ಶಾಲಾ-ಕಾಲೇಜು ಆವರಣದಲ್ಲಿ ಕಸ ಹಾಕುವವರು ನೀವೇ ಆಗಿರುವುದರಿಂದ, ಅದನ್ನು ಹೆಕ್ಕಿಕೊಂಡು ಹೋಗುವವರು ನೀವೆ ಆಗಬೇಕೆಂದ ಅವರು ಒಬ್ಬ ವಿದ್ಯಾರ್ಥಿ ತಪ್ಪು ಮಾಡಿದರೆ ಇದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಕಪ್ಪು ಚುಕ್ಕೆ ಹೀಗಾಗಿ ವಿದ್ಯಾರ್ಥಿಗಳು ಆದಷ್ಟು ಕಸ ಅಲ್ಲಾಲ್ಲಿ  ಹಾಕುವುದನ್ನು ನಿಲ್ಲಿಸಿ, ಕಾಲೇಜು ಆವರಣವನ್ನು  ಶೂನ್ಯ ತ್ಯಾಜ್ಯವನ್ನಾಗಿ ಮಾಡಿ ಎಂದು ಕರೆ ನೀಡಿದರು.

ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಮಾತನಾಡಿ, ಪರಿಸರಕ್ಕೆ ನಾವೇನು ಕೊಡುತ್ತೇವೆಯೋ ಅದೇ ನಮಗೆ ತಿರುಗಿ ಸಿಗುತ್ತದೆ. ಹಾಗಾಗಿ ನಮ್ಮ ಪರಿಸರವನ್ನು ಆದಷ್ಟು ಚೆನ್ನಾಗಿಟ್ಟುಕೊಳ್ಳೋಣ ಎಂದ ಅವರು ೪೦% ರಷ್ಟು  ಕಸ ಆಗುವುದೇ ಏಕಬಳಕೆಯ ವಸ್ತುಗಳಿಂದ ಕಸ ಉತ್ಪಾದನೆಯಾಗುತ್ತದೆ. ಹಾಗಾಗಿ ಆದಷ್ಟು ಪ್ಲಾಸ್ಟಿಕ್ ವಸ್ತುಗಳು ಮನೆಗೆ ತರುವುದನ್ನು ಕಡಿಮೆಗೊಳಿಸಿದರೆ, ಪ್ಲಾಸ್ಟಿಕ್ ಉತ್ಪಾದನೆ ಮತ್ತು ಬಳಕೆಯನ್ನು ಕಡಿಮೆಗೊಳಿಸಲು ಸಾಧ್ಯ ಎಂದರು.

 ಪುರಸಭಾ ಮುಖ್ಯಧಿಕಾರಿ ಇಂದು.ಎಂ, ಪರಿಸರ ಅಭಿಯಂತರೆ ಶಿಲ್ಪಾ, ಹವ್ಯಾಸಿ ಪತ್ರಕರ್ತ ಅಮೃತ್ ಮಲ್ಲ ಅವರುಗಳು ಮಾತನಾಡಿ, ಶಾಲಾ ಆವರಣವನ್ನು ಶೂನ್ಯ ತ್ಯಾಜ್ಯ ಆವರಣವನ್ನಾಗಿ ಮಾಡುವಂತೆ ಸಲಹೆ ನೀಡಿದರು.


Post a Comment

0 Comments