ನಂತರ ಆರ್ಶೀವಾಚಿಸಿ ಮಾತನಾಡಿದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕನ್ನಡವನ್ನು ಭಾಷವಾರು ಕ್ರಾಂತಿಗಳ ವಿಭಜನೆಯಾಗುವ ಮೊದಲೇ ಉತ್ತಮ ಸಂಕಲ್ಪವನ್ನು ಮಾಡಿ, ಪ್ರಥಮವಾಗಿ ಕನ್ನಡ ಬಾಷೆಗೆ ಆದ್ಯತೆಯನ್ನು ನೀಡಬೇಕು ಇದರೊಂದಿಗೆ ಮಾತೃಭಾಷೆಯಾದ ತುಳು ಭಾಷೆಗೂ ಪ್ರಾಮುಖ್ಯತೆಯನ್ನು ನೀಡಿದರೂ, ಕನ್ನಡ ಭಾಷೆಯನ್ನು ಆಡು ಭಾಷೆಯಾಗಿ ನಿರಂತರವಾಗಿ ಬಳಸಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ವಿವಿಧ ಶಾಲಾ-ಕಾಲೇಜಿನ ಸುಮಾರು 1253 ವಿದ್ಯಾರ್ಥಿಗಳು, ಜೈನ್ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ತಹಶೀಲ್ದಾರ್ ಸತ್ಯಪ್ಪ ಸಚ್ಚಿದಾನಂದ ಕುಚನೂರು, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಮುಖ್ಯಾಧಿಕಾರಿ ಇಂದು.ಎಂ, ಪುರಸಭಾ ಸದಸ್ಯೆ ಶ್ವೇತಾ ಜೈನ್, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಅಧ್ಯಾಪಕ ವೃಂದ, ಅಧ್ಯಾಪಕೇತರ ವರ್ಗದವರು ಪಾಲ್ಗೊಂಡರು
0 Comments