ಜೈನಕಾಶಿಗೆ ಆಗಮಿಸಿದ ಕೆಂಪೇಗೌಡ ರಥಯಾತ್ರೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಪ್ರಗತಿ ಪ್ರತಿಮೆ ಎಂದು ನಾಮಕರಣ ಮಾಡಲು ರಾಜ್ಯದೆಲ್ಲೆಡೆಯಲ್ಲಿ ಪವಿತ್ರ ಮಣ್ಣು ಮತ್ತು ಜಲ ಸಂಗ್ರಹಣೆ ವಿಶಿಷ್ಟ ಅಭಿಯಾನವನ್ನು "ಬನ್ನಿ ನಾಡ ಕಟ್ಟೋಣ" ಎಂಬ ಘೋಷ ವಾಕ್ಯದೊಂದಿಗೆ 15 ದಿನಗಳ ವರೆಗೆ ಹಮ್ಮಿಕೊಂಡ ರಥಯಾತ್ರೆಯು ಶುಕ್ರವಾರ ಜೈನಕಾಶಿ ಮೂಡುಬಿದಿರೆಗೆ ಆಗಮಿಸಿತು.

ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ  ಪಂಡಿತಾಚಾರ್ಯವರ್ಯ ಸ್ವಾಮೀಜಿ, ತಾಲೂಕು ತಹಶೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು ಮತ್ತು ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅವರು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಜೈನಮಠದ ಆವರಣದಲ್ಲಿ ಪೂರ್ಣಕುಂಭದ ಸ್ವಾಗತದೊಂದಿಗೆ ಬರಮಾಡಿಕೊಂಡು

ಮೂಡುಬಿದಿರೆಯ ಮೃತ್ತಿಕೆಯನ್ನು  ಪ್ರಸಾದ್ ಕುಮಾರ್ ಅವರು ಅರ್ಪಿಸಿದರು.

 ನಂತರ ಆಶೀರ್ವಚನ ನೀಡಿದ ಸ್ವಾಮೀಜಿ ಆಧುನಿಕ ಬೆಂಗಳೂರನ್ನು ಬೆಳಗಿದ ಕೆಂಪೇಗೌಡರು ಕನ್ನಡದ ಕಸ್ತೂರಿ, ಕನ್ನಡದ ಯೋಧ, ಸಂಸ್ಕೃತಿ ಮತ್ತು ಕನ್ನಡದ ಹಿರಿಮೆಯಾಗಿದ್ದಾರೆ. ಗುಜರಾತಿಯಲ್ಲಿ ಸರದಾರ ವಲ್ಲಭಭಾಯಿ ಪಟೇಲರ ಮೂರ್ತಿ ಇರುವಂತೆ ಕರ್ನಾಟಕದ ಉಕ್ಕಿನ ಮನುಷ್ಯ ಕೆಂಪೇಗೌಡರ  514ನೇ ಉತ್ಸವದ ಸಂದರ್ಭದಲ್ಲಿ ಮೂರ್ತಿ ಮೈವೆತ್ತಿ ಬರುವಂತ್ತಾಗಲಿ ಎಂದು ನುಡಿದರು.

 ಬೆಂಗಳೂರಿನಲ್ಲಿ ಐವತ್ತನಾಲ್ಕು ಪೇಟೆಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಕುಮುದೇಂದ್ರ ಮುನಿಗಳು ಸಾವಿರಾರು ಭಾಷೆಗಳನ್ನು ಬರೆದವರು.ಮುನಿಗಳ ಪಕ್ಕದಲ್ಲಿಯೇ ಕೆಂಪೇಗೌಡರ ಮಾಗಡಿಯಿದೆ ಆದ್ದರಿಂದ ಜೈನಕಾಶಿ ಮತ್ತು ಕೆಂಪೇಗೌಡರಿಗೆ ಅನೋನ್ಯವಾದ ಸಂಬಂಧವಿದೆ ಈ ನೆಲೆಯಲ್ಲಿ ಮೂಡುಬಿದಿರೆಗೆ ರಥ ಆಗಮಿಸಿ ಮೃತಿಗೆ ತೆಗೆದುಕೊಂಡು ಹೋಗುತ್ತಿರುವುದು ಸಂತಸ ನೀಡಿದೆ ಎಂದರು.

ಪುರಸಭಾ ಉಪಾಧ್ಯಕ್ಷೆ ಸುಜಾತ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ  ನಾಗರಾಜ ಪೂಜಾರಿ, ಪುರಸಭಾ ಸದಸ್ಯರಾದ ಸೌಮ್ಯ ಶೆಟ್ಟಿ, ಶ್ವೇತಾ ಕುಮಾರಿ, ದ‌.ಕ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ,ಪುರಸಭಾ ಮುಖ್ಯಾಧಿಕಾರಿ ಇಂದು ಎಂ., ಪರಿಸರ ಅಭಿಯಂತರೆ ಶಿಲ್ಪಾ, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ., ಇರುವೈಲಿನ ಪಿಡಿಒ ಕಾಂತಪ್ಪ, ನೆಲ್ಲಿಕಾರು ಪಿಡಿಓ ಪ್ರಶಾಂತ್, ಪಾಲಡ್ಕ ಗ್ರಾ.ಪಂ.ಅಧ್ಯಕ್ಷ ದಿನೇಶ್ ಕಾಂಗ್ಲಾಯಿ, ಉಪಾಧ್ಯಕ್ಷ ಸುಕೇಶ್ ಶೆಟ್ಟಿ,  ಇರುವೈಲು ಗ್ರಾ.ಪಂ.ಅಧ್ಯಕ್ಷ ವಲೇರಿಯನ್ ಕುಟಿನ್ಹಾ, ಬೆಳುವಾಯಿ ಗ್ರಾ.ಪಂ ಸದಸ್ಯ ಭರತ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಈಶ್ವರ ಕಟೀಲ್, ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್, ಮಂಡಲದ ಪ್ರಧಾನ ಕಾರ್ಯದರ್ಶಿ ಕೇಶವ ಕರ್ಕೇರಾ, ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ ಮತ್ತಿತ್ತರರು ಈ ಸಂದರ್ಭದಲ್ಲಿದ್ದರು.

 ತಾ.ಪಂ.ಕಾರ್ಯನಿರ್ವಹಣಾಧಿಕಾರಿ ದಯಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತೆಂಕಮಿಜಾರು ಗ್ರಾ.ಪಂ.ನ ಸಿಬಂದಿ ರಾಕೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

ತಾ.ಪಂಚಾಯತ್ ನ ಸಿಬಂದಿಗಳು , ಸಂಜೀವಿನಿ ಒಕ್ಕೂಟದ ಸದಸ್ಯರು ಈ ಸಂದರ್ಭದಲ್ಲಿದ್ದರು.

  

Post a Comment

0 Comments