ಬಿಸಿ ರೋಡ್ ಅಡ್ಡ ಹೊಳೆ ಚತುಷ್ಪತ ರಸ್ತೆ ಕಾಮಗಾರಿಯ ವೇಳೆ ಐದು ಗ್ರಾಮಗಳಲ್ಲಿ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಅದನ್ನು ಕೂಡಲೇ ಸರಿಪಡಿಸುವಂತೆ ಹಾಗೂ 15 ದಿನಗಳಿಗೊಮ್ಮೆ ಶಾಸಕ ರಾಜೇಶ್ ನಾಯಕ್ ಗುಳಿಪಾಡಿಗುತ್ತು ಕಚೇರಿಯಲ್ಲಿ ಪರಾಮರ್ಶೆ ಸಭೆ ನಡೆಸುವಂತೆ ಮತ್ತು ಶಾಸಕರ ಕಛೇರಿಯಿಂದ ಬರುವ ಸೂಚನೆಗಳನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ರವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರ ಸಮ್ಮುಖದಲ್ಲಿ ನಡೆದ ಈ ಸಭೆಯಲ್ಲಿ ಹಲವಾರು ದೂರುಗಳು ಕೇಳಿ ಬಂದಿದ್ದು ಈ ಬಗ್ಗೆ ನಳಿನ್ ಕುಮಾರ್ ಕಟೀಲ್ ಸ್ಪರ್ಶ ನಿರ್ದೇಶನವನ್ನು ನೀಡಿದ್ದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಖಡಕ್ ಆಗಿ ತಿಳಿಸಿದ್ದಾರೆ. ಮಾತ್ರವಲ್ಲದೆ ದೂರು ನೀಡಿ ಹದಿನೈದು ದಿನಗಳಾದರೂ ಸಮಸ್ಯೆ ಗೊತ್ತಾಗಲಿಲ್ಲ ಎಂದರೆ ಏನು ಅರ್ಥ, ಶಾಸಕರ ಕಚೇರಿಯಿಂದ ಯಾವುದೇ ಕರೆ ಬಂದರೂ ತುರ್ತು ಸ್ಪಂದಿಸಿ ಸಮಸ್ಯೆಯನ್ನು ಪರಿಹರಿಸಬೇಕು ಮತ್ತು 15 ದಿನಗಳಿಗೊಮ್ಮೆ ಶಾಸಕರ ಕಚೇರಿಯಲ್ಲಿ ಪರಾಮರ್ಶೆ ಸಭೆ ನಡೆಸಬೇಕು ಎಂದು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಸಂದರ್ಭದಲ್ಲಿ ಪೈಪ್ ಗಳೆಲ್ಲ ಒಡೆದು ಹೋಗಿ ನೀರಿನ ಸಮಸ್ಯೆ ಉಂಟಾಗಿದ್ದು ಹಲವಾರು ಗ್ರಾಮಗಳಿಗೆ ಇದು ತೊಂದರೆಯಾಗಿದನ್ನು ಗಮನಿಸಿ ಖುದ್ದು ಶಾಸಕರೇ ಈ ಭಾಗಕ್ಕೆ ಆಗಮಿಸಿ ಸಭೆಯನ್ನು ನಡೆಸಿದರು.
0 Comments