ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಕಾರ್ಯವನ್ನು ಶ್ಲಾಘಿಸಿದ ನಟ ರಮೇಶ್ ಅರವಿಂದ್: ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ

ಜಾಹೀರಾತು/Advertisment
ಜಾಹೀರಾತು/Advertisment


 ಕೋಟ ಶಿವರಾಮ ಕಾರಂತ ಎಂಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಯ ಸವಿನೆನಪಿಗಾಗಿ ನಿರ್ಮಿಸಿದ ಕಾರಂತ ಥೀಮ್ ಪಾರ್ಕ್ ನಲ್ಲಿ ಕಾರಂತರ ಜೀವನಾಧಾರವನ್ನು, ಜೀವನಚರಿತ್ರೆಯನ್ನು ಹಾಗೂ ಅವರು ಬರೆದಂತಹ ಸಾಹಿತ್ಯಗಳನ್ನು ಮತ್ತು ಅವರು ನಡೆದಂತಹ ಹಾದಿಯನ್ನು ಅತ್ಯಂತ ಸುಂದರವಾಗಿ ವರ್ಣಿಸಿದ್ದು ತೋರಿಸಿದ್ದು ಮಾತ್ರವಲ್ಲದೆ ಅದನ್ನು ಜಗತ್ತಿಗೆ ಪರಿಚಯಿಸುತ್ತಿರುವ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ನಿಜವಾಗಿಯೂ ಸಂತಸ ತಂದಿದೆ. ಇಂತಹ ಒಬ್ಬ ಶ್ರೇಷ್ಠ ವ್ಯಕ್ತಿಗೆ ಅಂತಹ ಒಂದು ಶ್ರೇಷ್ಠ ಗೌರವವನ್ನು ನೀಡಿದಂತಹ ನಮ್ಮ ರಾಜ್ಯದ ಜನಪ್ರಿಯ ಮತ್ತು ನೆಚ್ಚಿನ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ನಾನು ವಂದಿಸುತ್ತೇನೆ. ಇದು ನಿಜಕ್ಕೂ ಒಬ್ಬ ಸಾಹಿತಿಗೆ ಮತ್ತೊಬ್ಬ ಸಾಹಿತ್ಯದ ಅಭಿರುಚಿ ಇರುವಂತಹ ನಾಯಕ ಕೊಡುವಂತಹ ಗೌರವವಾಗಿದೆ.


 ಸಚಿವರ ಈ ಕಾರ್ಯವನ್ನು ನಾನು ಮುಕ್ತಕಂಠದಿಂದ ಶ್ಲಾಘಿಸುತ್ತೇನೆ. ಅತ್ಯಂತ ಸುಂದರವಾಗಿ ಜ್ಞಾನಪೀಠ ಪುರಸ್ಕೃತ ಕೋಟ ಶಿವರಾಮ ಕಾರಂತರವರ ಭವನ ಮತ್ತು ಅವರ ಚರಿತ್ರೆಯನ್ನು ಬಿಂಬಿಸಿದ್ದು ನನಗೆ ಅತ್ಯಂತ ಮುದ ನೀಡಿದೆ ಎಂದು ಖ್ಯಾತ ಚಲನಚಿತ್ರ ನಟರಮೇಶ್ ಅರವಿಂದ್ ತಿಳಿಸಿದರು. ಕೋಟ ಶಿವರಾಮ ಕಾರಂತ ಪ್ರತಿಷ್ಠಾನ ಇದರ ವತಿಯಿಂದ ನಡೆದ ಶಿವರಾಮ ಕಾರಂತರ ಹುಟ್ಟು ಹಬ್ಬದ ಪ್ರಯುಕ್ತ ಕಾರ್ಯಕ್ರಮ ಮತ್ತು ರಮೇಶ್ ಅರವಿಂದ್ ರವರಿಗೆ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭವು ಕೋಟದ ಶಾಂಭವಿ ಶಾಲಾ ವಠಾರದಲ್ಲಿ ನಡೆದಿದ್ದು ಈ ಕಾರ್ಯಕ್ರಮವನ್ನು ಉದ್ದೇಶಿಸಿ ರಮೇಶ್ ಅರವಿಂದ್ ಮಾತನಾಡಿದರು.

Post a Comment

0 Comments