ಮೂಡುಬಿದಿರೆ: ಹೋಲಿ ಸ್ಪಿರೀಟ್ ಚರ್ಚ್ ಸಂಪಿಗೆ, ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂಮೆಂಟ್ ಸಂಪಿಗೆ ಘಟಕದ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಹಾಗೂ ರೆಡ್ ಡ್ರಾಫ್ ಮಂಗಳೂರು ಇವುಗಳ ಸಹಯೋಗದೊಂದಿಗೆ ಸಂಪಿಗೆ ಚರ್ಚ್ ನಲ್ಲಿ ಭಾನುವಾರ ರಕ್ತದಾನ ಶಿಬಿರ ನಡೆಯಿತು.
ಚರ್ಚಿನ ಧರ್ಮಗುರು ರೆ.ಫಾ. ನೆಲ್ಸನ್ ಒಲಿವರ್ ಶಿಬಿರವನ್ನು ಉದ್ಘಾಟಿಸಿದರು.
ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ನ ವೈದ್ಯರಾದ ಕೀರ್ತಿ, ಭಾರತೀಯ ಕಥೋಲಿಕ್ ಯುವ ಸಂಚಲನದ ಮಂಗಳೂರು ವಲಯದ
ಉಪಾಧ್ಯಕ್ಷ ವಿನ್ ಸ್ಟನ್ ಸಿಕ್ವೇರಾ, ಮೂಡುಬಿದಿರೆ ವಲಯದ ಕಾರ್ಯದರ್ಶಿ ಜೋಯ್ ಸ್ಟನ್ ಡಿ'ಸೋಜಾ, ಚರ್ಚಿನ ಉಪಾಧ್ಯಕ್ಷ ರಿಚಾಡ್೯ ಖರ್ಡೋಜಾ ಮತ್ತು ಕಾರ್ಯದರ್ಶಿ ವಿಲ್ಫ್ರೆಡ್ ಮಿಸ್ಕಿತ್ ಉಪಸ್ಥಿತರಿದ್ದರು.
0 Comments