ಮೂಡುಬಿದಿರೆ: ಇಲ್ಲಿನ ಆಳ್ವಾಸ್ ರಸ್ತೆ ಬಳಿಯ ಸ್ವರಾಜ್ ಮೈದಾನದ ಸಮೀಪ ಆರ್.ಆರ್ ಪ್ಲಾಜ್ ಕಟ್ಟಡದಲ್ಲಿ ಖ್ಯಾತ ಕಾರ್ಯಕ್ರಮ ನಿರೂಪಕ ದೀಕ್ಷಿತ್ ಮಾಲೀಕತ್ವದ ಡಿ.ಕೆ.ಎಸ್. ಫುಡ್ ಫ್ಯಾಕ್ಟರಿಯ ಉದ್ಘಾಟನಾ ಸಮಾರಂಭ ನಡೆಯಿತು.
ಆಳ್ವಾಸ್ ಆಸ್ಪತ್ರೆಯ ಮುಖ್ಯಸ್ಥ ಶ್ರೀ ವಿನಯ ಆಳ್ವರವರು ನೂತನ ಉದ್ಯಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಈ ಫುಡ್ ಫ್ಯಾಕ್ಟರಿಯಲ್ಲಿ ಅತೀ ಕಡಿಮೆ ದರದಲ್ಲಿ ಶುಚಿ-ರುಚಿಯಾದ ಫಾಸ್ಟ್ ಫುಡ್ ದೊರೆಯಲಿದೆ ಎಂದು ಮಾಲೀಕ ದೀಕ್ಷಿತ್ ತಿಳಿಸಿದ್ದಾರೆ.
ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ,ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ, ಪುರಸಭಾ ಸದಸ್ಯೆ ಶಕುಂತಲಾ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯ ಸ್ಥಾಪಕಾಧ್ಯಕ್ಷ ಪ್ರಕಾಶ್ ಜೆ.ಶೆಟ್ಟಿಗಾರ್
ದೇವಾಡಿಗ,ಕಾಮಿಡಿ ಕಿಲಾಡಿಯ ಕಲಾವಿದರುಗಳಾದ ಅನೀಶ್ ವೇಣೂರು, ವಿಶ್ವನಾಥ್ ಶೆಟ್ಟಿ ತೋಡಾರು, ಧೀರಾಜ್ ನೀರುಮಾರ್ಗ ಮತ್ತಿತರರು ಫುಡ್ ಫ್ಯಾಕ್ಟರಿಗೆ ಭೇಟಿ ನೀಡಿ ಶುಭಹಾರೈಸಿದರು.
0 Comments