ಬ್ರಿಟನ್ ದೇಶದ ಪ್ರಧಾನಿಯಾಗಿ ಕರ್ನಾಟಕದ ಅಳಿಯ ರಿಷಿ ಸುನಖ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ರಿಷಿ ಸುನಕ್ ಎರಡನೇ ಸ್ಥಾನಕ್ಕೆ ಕುಸಿದಿದ್ದರು. ಈ ಮೂಲಕ ಭಾರತದ ವ್ಯಕ್ತಿಯೋರ್ವ ಬ್ರಿಟನ್ ದೇಶವನ್ನು ಆಳುವುದು ತಪ್ಪಿತ್ತು.
ಆದರೆ ರಾಜಕೀಯ ಬೆಳವಣಿಗೆಯಲ್ಲಿ ಪ್ರಧಾನಿಯಾಗಿ ಆಯ್ಕೆಯಾಗಿ ತಿಂಗಳಲ್ಲೇ ಟ್ರಸ್ ರಾಜೀನಾಮೆ ನೀಡಿದ್ದರು. ಇದೀಗ ಆ ಸ್ಥಾನಕ್ಕೆ ರಿಷಿ ಸುನಕ್ ಆಯ್ಕೆಯಾಗಿದ್ದಾರೆ.
ರಿಷಿ ಸುನಕ್ ಕರ್ನಾಟಕದ ಅಳಿಯರಾಗಿದ್ದಾರೆ. ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರ ಪುತ್ರಿಯ ಪತಿಯಾಗಿರುವ ರಿಷಿ ಸುನಕ್ ಕರುನಾಡಿನ ಅಳಿಯರಾಗಿದ್ದಾರೆ.
ಒಂದು ಕಾಲದಲ್ಲಿ ಭಾರತವನ್ನು ಆಳಿದ್ದ ಬ್ರಿಟಿಷರ ನಾಡಿನಲ್ಲಿ ಇಂದು ಭಾರತೀಯ ಪ್ರಧಾನಮಂತ್ರಿಯಾಗಿ ಆಯ್ಕೆ ಆಗಿರುವುದು ದೇಶದಲ್ಲಿ ಸಂಭ್ರಮ ಮನೆ ಮಾಡಿದೆ.
0 Comments