ಅಕ್ಟೋಬರ್ 16ರಂದು ಜೈನ್ ಮಿಲನ್ ಸಮ್ಮೇಳನ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಇಲ್ಲಿನ ಭಾರತೀಯ ಜೈನ್ ಮಿಲನ್ ವಲಯ-8 ಆಯೋಜಿಸಿರುವ ಬದುಕು ಹಾಗೂ ಬದುಕಲು ಬಿಡು ಎಂಬ ಘೋಷಣೆಯೊಂದಿಗೆ ರಾಜ್ಯ ಮಟ್ಟದ ಜೈನ್ ಮಿಲನ್ ವಲಯ, ಸಮ್ಮೇಳನವು ಅಕ್ಟೋಬರ್ 16 ರವಿವಾರದಂದು ಕಲ್ಲಬೆಟ್ಟು ಎಕ್ಸಲೆಂಟ್‌ ಕಾಲೇಜಿನ ನೂತನ ಸಭಾಂಗಣದಲ್ಲಿ  ನಡೆಯಲಿದೆ.  ಎಂದು  ವಲಯಾಧ್ಯಕ್ಷ ವೀರ ಪುಷ್ಪರಾಜ್ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ ಆರಂಭವಾಗುವ ಈ ಸಮ್ಮೇಳನವನ್ನು ಧರ್ಮಸ್ಥಳದ ಧರ್ಮಾಧಿಕಾರಿ  ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಲಿದ್ದಾರೆ. ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ  ಪಾವನ ಸಾನಿಧ್ಯ ನೀಡಲಿದ್ದು, ವಿಶೇಷ ಸಾಧನೆ ಮಾಡಿದವರಿಗೆ ರಾಜ್ಯ ಮಟ್ಟದ "ಮಿಲನ್ ಶ್ರೀ" ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್‌ ಕುಮಾರ್  ಪ್ರಶಸ್ತಿ ಪ್ರಧಾನ ಮಾಡಲಿದ್ದು, ಇದೇ ಸಂದರ್ಭ ಹೊರತರಲಿರುವ "ಚೂಡಾಮಣಿ" ಎಂಬ ಸ್ಮರಣ ಸಂಚಿಕೆಯನ್ನು ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ರವರು ಬಿಡುಗಡೆ ಮಾಡಲಿದ್ದಾರೆ. ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ  ಡಿ. ಸುರೇಂದ್ರ ಕುಮಾರ್ ರವರು ಉಪಸ್ಥಿತರಿದ್ದು, ವಲಯಾಧ್ಯಕ್ಷ ಪುಷ್ಪರಾಜ್ ಜೈನ್ ರವರು ಈ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಭಾರತೀಯ ಜೈನ್ ಮಿಲನ್ ಪ್ರಧಾನ ಕಾರ್ಯದರ್ಶಿ ರಾಜೇಶ್, ಎಮ್. ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಕೋಶಾಧಿಕಾರಿ  ಪ್ರಮೋದ್ ಕುಮಾರ್, ವಲಯ ಕಾರ್ಯದರ್ಶಿ  ಸಚಿನ್ ಕುಮಾರ್, ವಲಯ ನಿರ್ದೇಶಕ  ಜಯರಾಜ್ ಕಂಬ್ಳಿ,  ಮೂಡುಬಿದಿರೆ ಜೈನ್ ಮಿಲನ್ ಅಧ್ಯಕ್ಷ ನೆಮಿರಾಜ್ ಜೈನ್  ಈ ಸಂದರ್ಭದಲ್ಲಿದ್ದರು.


Post a Comment

0 Comments