ಮೂಡುಬಿದಿರೆ : ಜೇಸಿಐ ಮೂಡುಬಿದಿರೆ ತ್ರಿಭುವನ್ ವತಿಯಿಂದ ಜೇಸಿ ಸಪ್ತಾಹ 2022 'ನಮಸ್ತೆ ಯು ಸೆ 9ರಿಂದ 15ರವರೆಗೆ ಜರಗಲಿದೆ. ಜೇಸಿಐ ಮೂಡುಬಿದಿರೆ ತ್ರಿಭುವನ್‌ನ ಅಧ್ಯಕ್ಷೆ ಶಾಂತಲಾ ಎಸ್ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಸೆ೯ರಂದು ಸಂಜೆ 5ಕ್ಕೆ ಸಮಾಜಮಂದಿರದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು ಜೇಸಿ ವಲಯದ ಪೂರ್ವಾಧ್ಯಕ್ಷ ಡಾ. ಅರವಿಂದ ಕೇದಿಗೆ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಅಧ್ಯಕ್ಷ ಮಹಮ್ಮದ್ ಆರಿಫ್, ಜೇಸಿ ಮಾಜಿ ಅಧ್ಯಕ್ಷೆ ರಶ್ಮಿತಾ ಜೈನ್ ಭಾಗವಹಿಸಲಿದ್ದಾರೆ. ಬಳಿಕ ಅಜ್ಜಿಕಥೆ, ಮೆಹಂದಿ, ಕಲಾತ್ಮಕವಾಗಿ ಕೂದಲು ಹೆಣೆಯುವ ಸ್ಪರ್ಧೆ ನಡೆಯಲಿದೆ. ಅದೇ ದಿನ ವೇಣೂರಿನ ನವಚೇತನ ವಿಶೇಷ ಶಾಲೆಯ ಮಕ್ಕಳೊಂದಿಗೆ ವಿವಿಧ ಕರ‍್ಯಕ್ರಮಗಳು ನಡೆಯಲಿದೆ.
ಸೆ 10ರಂದು ಯುವ ಉದ್ಯಮಿಗಳಿಗೆ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ, ಮಾರ್ಗದರ್ಶನ ನಡೆಯಲಿದೆ.
ಬಳಿಕ ಮೂಡುಬಿದಿರೆ ರೋಟರಿ ಕ್ಲಬ್‌ಗಳೊಂದಿಗೆ ಸಂವಾದ ಕರ‍್ಯಕ್ರಮ ನಡೆಯಲಿದೆ. ಅದೇ ದಿನ ಧವಲಾ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ದೇಶಭಕ್ತಿಗೀತೆ ಸ್ಪರ್ಧೆ ನಡೆಯಲಿದೆ.
ಸೆ 11ರಂದು ಸಾರ್ವಜನಿಕರಿಗಾಗಿ `ಗೀತ್ ಗಾತೆ ಚಲ್ ಕರೋಕೆ ಸಂಗೀತ ಸ್ಪರ್ಧೆ ನಡೆಯಲಿದೆ ಹಾಗೂ ಆರೋಗ್ಯ ಮತ್ತು ದೈಹಿಕ ಕ್ಷಮತೆಯ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಲಿದೆ.
ಸೆ 12ರಂದು ಜೈನ್ ಹೈಸ್ಕೂಲ್‌ನಲ್ಲಿ ನಿರುಪಯುಕ್ತ ಬಟ್ಟೆ ಮತ್ತು ಪೇಪರ್‌ಗಳಿಂದ ಚೀಲ ತಯಾರಿಯ ಬಗ್ಗೆ ತರಬೇತಿಯನ್ನು ಸ್ಕಿಲ್ ಇಂಡಿಯಾ ಇದರ ಟ್ರೆಂನರ್ ನಡೆಸಿಕೊಡಲಿದ್ದಾರೆ.
ಸೆ23ರಂದು ಧವಳಾ ಕಾಲೇಜಿನಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ಕಾರ್ಯಕ್ರಮ, ಸೆ 14ರಂದು ಹಿರಿಯ ನಾಗರಿಕರೊಂದಿಗೆ ಹಳೆಯ ನೆನಪುಗಳ ಸಂವಹನ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸೆ. 15ರಂದು ಸಮಾಜ ಮಂದಿರದಲ್ಲಿ ಸಮಾರೋಪ ನಡೆಯಲಿದ್ದು ಜೇಸಿ ಸಾಧಕರಿಗೆ ಕಮಲಪತ್ರ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜೇಸಿ ಸಾಧಕರಿಗೆ ಗೌರವ ಕಾರ್ಯಕ್ರಮ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಕರ‍್ಯದರ್ಶಿ ಸುನಿಲ್ ಕುಮಾರ್, ಕೋಶಾಧಿಕಾರಿ ಅಬ್ದುಲ್ ಹಮೀದ್, ಜೇಸಿರೆಟ್ ಅಧ್ಯಕ್ಷೆ ಮಮತಾ ಸಚ್ಚಿದಾನಂದ, ವಲಯಾಧಿಕಾರಿ ಸಂತೋಷ್ ಕುಮಾರ್, ಕರೋಕೆ ಸಂಯೋಜಕ ನವೀನ್ ಟಿ.ಆರ್. ಉಪಸ್ಥಿತರಿದ್ದರು.
0 Comments