ಮೂಡುಬಿದಿರೆ ಮಹಾವೀರ ಕಾಲೇಜು ಟ್ರಸ್ಟ್ ಸಂಸ್ಥಾಪಕರ ದಿನಾಚರಣೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜು ಟ್ರಸ್ಟ್ ಸಂಸ್ಥಾಪಕರ ದಿನಾಚರಣೆ ಕಾಲೇಜು ಆವರಣದ ಎಸ್‌ಎನ್‌ಎಂ ಪಾಲಿಟೆಕ್ನಿಕ್ ಸಭಾಭವನದಲ್ಲಿ ಜರುಗಿತು.

ಭಾರತ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜ| ಅಬ್ದುಲ್ ನಝೀರ್‌ರವರು ಭಾಗವಹಿಸಿ ವಿದ್ಯಾರ್ಥಿಗಳು ಸಮಾಜದ ಎಲ್ಲ ಆಗು ಹೋಗುಗಳ ತಿಳುವಳಿಕೆಯನ್ನು ಪಡೆದುಕೊಂಡು ಶಿಕ್ಷಣವನ್ನುತಮ್ಮದಾಗಿಸಿಕೊಳ್ಳಬೇಕು. ಜಾಗತಿಕ ಬದಲಾವಣೆಗೆ ಸ್ಪಂದಿಸಬೇಕು. ತಾಂತ್ರಿಕ ಜ್ಞಾನವನ್ನು ಬೆಳೆಸಿಕೊಂಡು ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುವ ಮೂಲಕ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಮಹಾವೀರ ಕಾಲೇಜು ಟ್ರಸ್ಟ್‌ನ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಸಭಾಧ್ಯಕ್ಷತೆ ವಹಿಸಿ ಜ| ಅಬ್ದುಲ್ ನಝೀರ್‌ರನ್ನು ಮಾದರಿಯಾಗಿಟ್ಟುಕೊಂಡು ಅವರ ರೀತಿಯಲ್ಲಿ ಒಳ್ಳೆ ಮನಸ್ಸನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಸಾಧನಾಶೀಲರಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಶ್ರೀಮತಿ ಸಮೀರಾ ನಝೀರ್, ವಿಸ್ವಸ್ಥ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಉದ್ಯಮಿ ಮನೋಹರ ಎಸ್, ಕಾರ್ಯದರ್ಶಿ ಡಾ. ರಾಧಕೃಷ್ಣ ಉಪಸ್ಥಿತರಿದ್ದರು.

ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಬಿ.ಕಾಂ 9ನೇ ರ್‍ಯಾಂಕ್ ಪುರಸ್ಕೃತೆ ಜಸ್ಮಿತಾ ರೋಡ್ರಿಗಸ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು.

ಡಾ. ರಾಧಕೃಷ್ಣ ಶೆಟ್ಟಿ ಸ್ವಾಗತಿಸಿದರು. ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಜೆ.ಜೆ. ಪಿಂಟೋ ಧನ್ಯವಾದ ಸಲ್ಲಿಸಿ, ಡಾ. ಎಸ್. ಪಿ. ಗುರುದಾಸ್ ನಿರೂಪಿಸಿದರು.


Post a Comment

0 Comments