ಬ್ರೇಕಿಂಗ್:ಕೈ ನಾಯಕಿ ನವ್ಯಶ್ರೀ ವಿರುದ್ಧ ಬಿತ್ತು ಎಫ್.ಐ.ಆರ್.:ವೈರಲ್ ವೀಡಿಯೋ ಹಿಂದೆ ಬ್ಲಾಕ್‌ಮೇಲ್ ಷಡ್ಯಂತ್ರ.?

ಜಾಹೀರಾತು/Advertisment
ಜಾಹೀರಾತು/Advertisment


ಕಾಂಗ್ರೆಸ್ ನಾಯಕಿ ನವ್ಯಶ್ರೀ ವಿರುದ್ಧ ಬೆಳಗಾವಿಯಲ್ಲಿ  ಎಫ್ಐಆರ್ ದಾಖಲಾಗಿದೆ. ರಾಜಕುಮಾರ್ ಟಾಕಳೆ ಎನ್ನುವಂತಹ ವ್ಯಕ್ತಿ  ತನಗೆ ನವ್ಯಶ್ರೀ ಯವರು  ಬ್ಲಾಕ್ಮೇಲ್  ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೆಳಗಾವಿ ಎಪಿಎಂಸಿ  ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ  ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಸಚಿವರೋರ್ವರ ಪಿಎಸ್ ಆಗಿದ್ದ ರಾಜಕುಮಾರ್ ಟಾಕಳೆಗೆ ದಿನನಿತ್ಯ ಬ್ಲಾಕ್ಮೇಲ್ ಮಾಡುತ್ತಿರುವ ಕಾಂಗ್ರೆಸ್ ನಾಯಕಿ   ನವ್ಯಶ್ರೀ ವಿರುದ್ದ ನನಗೆ ಪ್ರತಿದಿನ ಕಿರುಕುಳ ಕೊಡುತ್ತಿದ್ದಾರೆ ಹಾಗೂ ಯಾವುದೋ ಒಂದು ವಿಷಯವನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದಾರೆ, ನನಗೆ  ನ್ಯಾಯ ಕೊಡಬೇಕು  ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ಹಿನ್ನಲೆಯಲ್ಲಿ ನವ್ಯಶ್ರೀ ವಿರುದ್ಧ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ಅವಳದ್ದು ಖಾಸಗಿ ವಿಡಿಯೋ,ಲೈಂಗಿಕ ಚಟುವಟಿಕೆ ನಡೆಸುವ ವಿಡಿಯೋ ವೈರಲ್ ಆಗಿದ್ದು ಈ  ಹಿನ್ನಲೆಯಲ್ಲಿ ಮಹತ್ವದ ಬೆಳವಣಿಗೆಯನ್ನು ಪಡೆದುಕೊಂಡಿದೆ.

Post a Comment

0 Comments