ಪ್ರವಾದಿ ಮೊಹಮ್ಮದರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದ ಬಿಜೆಪಿ ಉಚ್ಛಾಟಿತ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ತಿಂಗಳ ಹಿಂದೆ ಟಿವಿ ಸಂದರ್ಶನವೊಂದರಲ್ಲಿ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಎಂಟು ರಾಜ್ಯಗಳಲ್ಲಿ ಎಫ್ಐಆರ್ ದಾಖಲಾಗಿತ್ತು ಹಾಗೂ ಅವರ ಬಂಧನಕ್ಕೆ ಒತ್ತಡ ಹೆಚ್ಚಾಗಿತ್ತು. ಇದರ ತನಿಖೆಯು ಸುಪ್ರೀಂಕೋರ್ಟ್ ಅಂಗಳದಲ್ಲಿತ್ತು. ಈ ಹಿನ್ನೆಲೆಯಲ್ಲಿ ಇಂದು ಮಹತ್ವದ ಆದೇಶವನ್ನು ಹೊರಡಿಸಿದ ಸುಪ್ರೀಂಕೋರ್ಟ್ ನೂಪುರ್ ಶರ್ಮಾ ರವರನ್ನು ಬಂಧನದಿಂದ ರಕ್ಷಣೆ ಮಾಡಿದೆ. ಆಗಸ್ಟ್ 10 ರವರೆಗೆ ನೂಪುರ್ ಶರ್ಮಾ ರವರನ್ನು ಯಾವುದೇ ರೀತಿಯಾಗಿ ಬಂಧಿಸಬಾರದು ಎಂಬ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್ ನೀಡಿದೆ ಇದರಿಂದಾಗಿ ತನಿಖೆಯನ್ನು ಎದುರಿಸುತ್ತಿರುವ ನೂಪುರ್ ಶರ್ಮಾಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
0 Comments