ತೆಂಕಮಿಜಾರು ಗ್ರಾ.ಪಂ ಅಧ್ಯಕ್ಷೆ ರುಕ್ಮಿಣಿ ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆದ ಎರಡನೇ ಸುತ್ತಿನ ಗ್ರಾಮಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಒಂಟಿಮಾರಿನಲ್ಲಿ 2003ರಲ್ಲಿ 26 ಸೈಟ್‌ಗಳಿಗೆ ಹಕ್ಕುಪತ್ರವನ್ನು ನೀಡಲಾಗಿತ್ತು. ಆದರೆ ಕೆಲವರು ಬೇರೆ ಕಡೆಗಳಲ್ಲಿ ನಿವೇಶನವನ್ನು ಹೊಂದಿದ್ದಾರೆ. ಕಳೆದ ತಿಂಗಳು ತಹಶೀಲ್ದಾರ್ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಅವರು ಮೂಲಭೂತ ಸೌಕರ್ಯವಿಲ್ಲದ 6 ಕುಟುಂಬಗಳಿಗೆ ಮನೆಕಟ್ಟಿ ಕುಳಿತುಕೊಳ್ಳಲು ಒಂಟಿಮಾರಿನಲ್ಲಿ ಅವಕಾಶ ಕಲ್ಪಿಸಬೇಕೆಂದು ಸೂಚಿಸಿದ್ದರು. ಆದರೆ ಅಲ್ಲಿಂದ ಇನ್ನೊಂದು ಕಡೆಗೆ ಪರಿಶೀಲನೆ ನಡೆಸಲು ಹೋದ ಸಂದರ್ಭದಲ್ಲಿ ಅಲ್ಲಿಗೆ ಜಿ.ಪಂ.ನಿರ್ಗಮನ ಸದಸ್ಯ ಸುಚರಿತ ಶೆಟ್ಟಿ ಬಂದಿದ್ದು ತಹಶೀಲ್ದಾರ್ ಜತೆ ಮಾತನಾಡಿ ಹೋಗಿದ್ದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಅವರು ಎರಡು ಫೋನ್ ಕರೆಗಳು ಬಂದಿದ್ದವು. ಆ ನಂತರ ಪಂಚಾಯತ್‌ನವರೊAದಿಗೆ ಮಾತನಾಡಿದ ತಹಶೀಲ್ದಾರ್ ತಾನು ಬದಲಿ ವ್ಯವಸ್ಥೆ ಮಾಡಲು ಸೂಚಿಸಿರುವ ಮನೆಗಳಿಗೆ ತಡೆ ಹಿಡಿಯುವಂತೆ ಶಾಸಕರು ತಿಳಿಸಿದ್ದಾರೆಂದು ಹೇಳಿದರು. ಇದನ್ನೇ ತಪ್ಪಾಗಿ ಗ್ರಹಿಸಿದ ಗ್ರಾಮಸ್ಥರು ಇದು ಸುಚರಿತ ಶೆಟ್ಟಿಯೇ ಹೇಳಿರಬಹುದೆಂದು ಗ್ರಾಮದಲ್ಲಿ ಪ್ರಚಾರ ಮಾಡಿದ್ದರು. ಅಲ್ಲದೆ ಗ್ರಾಮಸ್ಥರಾದ ಭಾಸ್ಕರ್ ಶೆಟ್ಟಿ ಮತ್ತು ದಿನೇಶ್ ಎಂಬವರು ಮಾತನಾಡಿ ಸುಚರಿತ ಶೆಟ್ಟಿ ಹೇಳಿದ್ದು ಎಂದು ತಮ್ಮ ಮೇಲೆ ಆರೋಪವಿದೆ ಅಲ್ಲದೆ ಸೈಟಿನಲ್ಲಿ ಹಕ್ಕುಪತ್ರವನ್ನು ಪಡೆದುಕೊಂಡವರಿಗೆ ಎರಡೆರಡು ಮನೆಗಳಿವೆ ಆದ್ದರಿಂದ ಮತ್ತೆ ಇನ್ನೊಂದು ಮನೆಯನ್ನು ನೀಡಬಾರದೆಂದು ತಿಳಿಸಿದ್ದಲ್ಲದೆ ತಮ್ಮ ಮೇಲೆ ಆರೋಪ ಮಾಡಿದವರು ಯಾರೆಂದು ತಿಳಿಸಿ ಇಲ್ಲದಿದ್ದರೆ ಗ್ರಾಮಸಭೆ ಮಾಡಲು ಬಿಡುವುದಿಲ್ಲವೆಂದು ಪಟ್ಟು ಹಿಡಿದರು.
ಸೈಟ್‌ನ್ನು ತಡೆ ಹಿಡಿಯಲು ತಾನು ಶಾಸಕರ ಬಳಿ ಹೇಳಿಲ್ಲ ಆದರೆ ಸುಮ್ಮನೆ ನನ್ನ ಮೇಲೆ ಅಪಪ್ರಚಾರ ಮಾಡಲಾಗಿದೆ. ಈ ಬಗ್ಗೆ ತಾನು ಸತ್ಯ ಹೇಳಲು ಜಾರಂದಾಯನ ಕ್ಷೇತ್ರಕ್ಕೆ ಬರಲು ಸಿದ್ಧ ಎಂದು ಹೇಳಿ ಸಭೆಯಿಂದ ಕೆಳಗಿಳಿದರು. ಭಾಸ್ಕರ್ ಶೆಟ್ಟಿ ಹಾಗೂ ದಿನೇಶ್ ಅವರನ್ನು ಸಮಧಾನಪಡಿಸಿ ಗ್ರಾಮಸಭೆಯನ್ನು ಮುಂದುವರೆಸಲು ಅವಕಾಶ ನೀಡುವಂತೆ ವಿನಂತಿಸಿದರು. ಇದಕ್ಕೆ ಒಪ್ಪಿದ ಅವರು ಗ್ರಾಮಸಭೆಯನ್ನು ಮುಂದುವರೆಸಲು ಅವಕಾಶ ನೀಡಿದರು. ಮಳೆಗಾಲವಾದ್ದರಿಂದ ತೆಂಕಮಿಜಾರಿನಲ್ಲಿ ಸಂಜೆಯ ವೇಳೆಗೆ ಪದೇ ಪದೇ ಕರೆಂಟ್ ಕೈಕೊಡುತ್ತಿದೆ ಆದ್ದರಿಂದ ಹೆಚ್ಚುವರಿ ಲೈನ್ ಮ್ಯಾನ್‌ನನ್ನು ನೀಡಿ ಅವರು ಇಲ್ಲಿಯೇ ತಂಗುವAತೆ ಮಾಡಬೇಕೆಂದರು ಗ್ರಾಮಸ್ಥರಾದ ಜಯರಾಮ ಹೆಗಡೆ ಆಗ್ರಹಿಸಿದರು. ಪಂಚಾಯತ್ ನೀಡಿರುವ ನಿವೇಶನದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿ ವ್ಯವಹಾರವನ್ನು ನಡೆಸಲು ಅವಕಾಶ ನೀಡಲಾಗುತ್ತಿದೆ ಆದರೆ ಬಡವರು ಎಲ್ಲಿಯಾದರೂ ಜಾಗದಲ್ಲಿ ಮನೆ ಕಟ್ಟಿ ಕುಳಿತುಕೊಂಡರೆ ಜೆಸಿಬಿ ತಂದು ನೆಲಸಮ ಮಾಡುತ್ತೀರಿ ಎಂದು ಗ್ರಾಮಸ್ಥರಾದ ದೇವಿಪ್ರಸಾದ್ ತರಾಟೆಗೆ ತೆಗೆದುಕೊಂಡರು. ನಿವೇಶನವನ್ನು ವಾಣಿಜ್ಯ ವ್ಯವಹಾರಕ್ಕಾಗಿ ಬಳಸಿರುವ ಪ್ರಕರಣವು ಕೋರ್ಟಿನಲ್ಲಿದೆೆಂದು ಪಿಡಿಒ ರಕ್ಷಿತಾ ಡಿ.ಸ್ಪಷ್ಠನೆ ನೀಡಿದರು.
ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಹೇಶ್ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷೆ ಸಮಿತಾ, ಪಂಚಾಯತ್ ಸದಸ್ಯರು, ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷರಾದ ಕರುಣಾಕರ ಶೆಟ್ಟಿ (ಬಡಗಮಿಜಾರು), ಮಹೇಶ್ (ತೆಂಕಮಿಜಾರು) ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
0 Comments