ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯ ನಂತರ ನಡೆದ ಪಾರ್ಥಿವ ಶರೀರದ ಮೆರವಣಿಗೆಯ ಸಂದರ್ಭದಲ್ಲಿ ಪೊಲೀಸರಿಂದ ಲಾಠಿ ಪ್ರಹಾರ ನಡೆದಿದ್ದು ಈ ಸಂದರ್ಭದಲ್ಲಿ ಕಾಸರಗೋಡಿನ ಬಿಜೆಪಿ ಹಿರಿಯ ಮುಖಂಡರ ಮೇಲೆ ಲಾಠಿ ಬೀಸಿದ ಪಿಎಸ್ಐ ಅನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಪಾರ್ಥಿವ ಶರೀರದ ನಂತರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು ಈ ಸಂದರ್ಭದಲ್ಲಿ ಕಾಸರಗೋಡಿನ ಮಹೇಶ್ ಎಂಬವರ ಮೇಲೆ ಪಿಎಸ್ಐ ಓರ್ವರು ಅತಿರೇಕದ ವರ್ತನೆಯನ್ನು ತೋರಿದ್ದರು.ಇದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದು ಹಿಂದೂ ಸಂಘಟನೆಗಳಿಂದ ಆಕ್ರೋಶಕ್ಕೂ ಕಾರಣವಾಗಿತ್ತು. ಕೂಡಲೇ ಆತನನ್ನು ಅಮಾನತು ಮಾಡುವಂತೆ ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಸಹಿತ ಅನೇಕ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ ಪಿಎಸ್ಐ ಯನ್ನು ವರ್ಗಾವಣೆಗೊಳಿಸಿ ಐಜಿಪಿ ದೇವ ಜ್ಯೋತಿ ರೇ ಇವರು ಆದೇಶವನ್ನು ಹೊರಡಿಸಿದ್ದಾರೆ. ಸದ್ಯ ಯಾವ ಠಾಣೆಗೆ ವರ್ಗಾವಣೆಗೊಳಿಸಿದ್ದು ಎಂಬ ನಿರ್ಧಾರವನ್ನು ಪ್ರಕಟಿಸದೆ ಕೇವಲ ವರ್ಗಾವಣೆ ಆದೇಶವನ್ನು ಹೊರಡಿಸಲಾಗಿದೆ.
0 Comments