ಮೂಡುಬಿದಿರೆ: ಭೂ ಅಭಿವೃದ್ಧಿಗೆ ಸಂಬಂಧಿಸಿದ ಉದ್ಯಮಗಳನ್ನು ನಡೆಸುತ್ತಿರುವ / ಅರ್ಥ್ ಮೂವರ್ ಮಾಲೀಕರು ಡೀಸೆಲ್ ಬೆಲೆ ಹೆಚ್ಚಳ, ನಿರ್ವರ | ಹಣಾ ವೆಚ್ಚ, ಚಾಲಕರ ವೇತನ ಏರಿಕೆಯಿಂದ ಸಂಕಷ್ಟ | ಎದುರಿಸುತ್ತಿದ್ದು ಉದ್ಯಮದ ಉಳಿವಿಗಾಗಿ ಹತ್ತು ವರ್ಷಗಳ ಬಳಿಕ ಜೆಸಿಬಿ, ಟಿಪ್ಪರ್, ಹಿಟಾಚಿ ಬಾಡಿಗೆ ದರ ಪರಿಷ್ಕರಿಸಿರುವುದಾಗಿ ಅರ್ಥ್ ಮೂವರ್ಸ್ ಓನರ್ ಅಸೋಸಿಯೇಶನ್ ಅಧ್ಯಕ್ಷ ರಂಜಿತ್ ಪೂಜಾರಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪ್ರತಿ ಗಂಟೆಗೆ ಹಿಟಾಚಿ ದರ 1300, ಜೆಸಿಬಿ ದರ 1200, ಸಣ್ಣ ಹಿಟಾಚಿ 1100, ಟಿಪ್ಪರ್ ದಿನವೊಂದಕ್ಕೆ 7 ಸಾವಿರ ನಿಗದಿಪಡಿಸಲಾಗಿದೆ. ಪ್ರತೀ 5 ಕಿ.ಮೀ. ಒಳಗೆ ಹಿಟಾಚಿ ಸಾಗಾಟ
ವೆಚ್ಚನ್ನು 2 ಸಾವಿರ ರೂ.ಏರಿಕೆ ಮಾಡಲಾಗಿದೆ. ಕಾರ್ಕಳ, ಮೂಡುಬಿದಿರೆ, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಒಕ್ಕೂಟ ರಚಿಸಲಾಗಿದ್ದು ಈ ವಾಪ್ತಿಯಲ್ಲಿ ದರವು ಅನ್ವಯ ವಾಗಲಿದೆ. ಪ್ರತಿಯೊಬ್ಬರೂ ಒಕ್ಕೂಟ ನಿಗದಿಪಡಿಸಿದ ದರದಲ್ಲಿ ಕೆಲಸ ನಿರ್ವಹಿಸಬೇಕು. ನೋಂದಾಯಿತ ಗಾಡಿಗಳನ್ನು ಹೊರತು ಪಡಿಸಿ ಬೇರೆ ಗಾಡಿಗಳು ಈ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸು ವಂತಿಲ್ಲ, ಬೇರೆ ಜಿಲ್ಲೆ ಅಥವಾ ರಾಜ್ಯದಿಂದ ಬಾಡಿಗೆಗೆ ಅಥವಾ ಗುತ್ತಿಗೆಗೆ ಪಡೆಯುವಂತಿಲ್ಲ ಎಂದರು.
ಪ್ರಧಾನ ಕಾರದರ್ಶಿ ಸುಕೇಶ್ ಶೆಟ್ಟಿ, ಒಕ್ಕೂಟದ ಅಧ್ಯಕ್ಷ ವಿನಯ್ ಹೆಗ್ಡೆ, ಬಂಟ್ವಾಳ ವಲಯ ಅಧ್ಯಕ್ಷ ರಂಜಿತ್ ರಾವ್ ಹಾಗೂ ಆಲ್ವಿನ್ ಮಿನೇಜಸ್, ಆದಿರಾಜ ಜೈನ್ ಮತ್ತಿತರರು ಉಪಸ್ಥಿತರಿದ್ದರು.
0 Comments