ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಕೋಟ ಶ್ರೀನಿವಾಸ ಪೂಜಾರಿ ಅವರಂತಹ ಸಚಿವರು ಈವರೆಗೆ ಸಿಕ್ಕಿಲ್ಲ ಇನ್ನು ಮುಂದೆ ಸಿಗುವುದೂ ಇಲ್ಲ. ಹೀಗೆ ಹೇಳಿದ್ದು ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ. ಬೆಂಗಳೂರಿನಲ್ಲಿ ನಡೆದ ಕುಂಬಾರ ಕುಲಾಲ್ ಪ್ರಜಾಪತಿ ಸಮುದಾಯದ ಜಾಗೃತಿ ಸಮಾವೇಶದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾಜಿ ಸಚಿವ ಹಾಗೂ ಶಾಸಕ ಕೆ. ಎಸ್. ಈಶ್ವರಪ್ಪ ಮಾತನಾಡಿದರು.
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ರಾಜ್ಯದ ಸುತ್ತಗಲಕ್ಕೂ ಸುತ್ತಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಮೇಲಕ್ಕೆತ್ತುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಇವರ ಕೈಯಲ್ಲಿ ಅತ್ಯಂತ ಭದ್ರ ಹಾಗೂ ಪ್ರಾಮಾಣಿಕತೆಯಿಂದ ಕೂಡಿದೆ. ಇವರಲ್ಲಿ ಸರಳತೆ ಮಾತ್ರವಲ್ಲದೆ ಪ್ರಾಮಾಣಿಕತೆಯೂ ಇರುವುದರಿಂದ ಹಾಗೂ ಬಡ ಜನರ ನಾಡಿಮಿಡಿತ ಅರ್ಥ ವಾಗಿರುವುದರಿಂದ ಆ ಇಲಾಖೆಗೆ ನ್ಯಾಯ ಒದಗಿಸಿದಂತಾಗಿದೆ. ಬಹುಶಹ ಇಂತಹ ಈ ಇಲಾಖೆಗಳಿಗೆ ಇಂತಹ ಈ ಸಚಿವರು ಇನ್ನುಮುಂದೆ ಸಿಗುವುದು ತುಂಬಾ ಕಷ್ಟ ಎಂದು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಕೆ.ಎಸ್. ಈಶ್ವರಪ್ಪ ಹಾಡಿಹೊಗಳಿದ್ದಾರೆ.
0 Comments