ಲಿಪ್‌ಲಾಕ್ ಮಾತ್ರವಲ್ಲ ಸೆಕ್ಸ್ ಕೂಡಾ ಆಗಿದೆ:ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳ ರಾಸಲೀಲೆ ವೈರಲ್

ಜಾಹೀರಾತು/Advertisment
ಜಾಹೀರಾತು/Advertisment


ವಿದ್ಯಾರ್ಥಿಗಳನ್ನು ಪೋಷಕರು ಕಷ್ಟಪಟ್ಟು ಶಿಕ್ಷಣ ಲಭಿಸಲೆಂದು ಶಾಲಾ-ಕಾಲೇಜುಗಳಿಗೆ ಕಳಿಸುತ್ತಾರೆ. ಆದರೆ ಈ ರೀತಿ ಮನೆಯಿಂದ ಹೊರಹೋದ ಅದೆಷ್ಟೋ ವಿದ್ಯಾರ್ಥಿಗಳು ವಿವಿಧ ಚಟಗಳಿಗೆ ಬಿದ್ದು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಇಂತಹ ಅನೇಕ ಉದಾಹರಣೆಗಳು ಸಮಾಜದಲ್ಲಿ ಇವೆ. ಇದಕ್ಕೆ ತಕ್ಕಂತೆ ಮಂಗಳೂರಿನ ಪ್ರತಿಷ್ಠಿತ  ಕಾಲೇಜಿನ ವಿದ್ಯಾರ್ಥಿಗಳಿಂದ ವಿಡಿಯೋ ಲೀಕ್ ಆಗಿದ್ದು ಮಂಗಳೂರೇ ಬೆಚ್ಚಿಬಿದ್ದಿದೆ. ವಿದ್ಯಾರ್ಥಿಗಳು ಒಂದು ಕೊಠಡಿ ಒಳಗೆ ಕಿಸ್ಸಿಂಗ್ ಸ್ಪರ್ಧೆ ಆಯೋಜಿಸಿದ್ದು ಪರಸ್ಪರ ಯಾರು ಉತ್ತಮವಾಗಿ ಲಿಪ್ ಲಾಕ್ ಮಾಡುತ್ತಾರೆ ಅವರಿಗೆ ಬಹುಮಾನ ಎಂಬಂತೆ ತಮ್ಮ ವ್ಯಾಪ್ತಿಯೊಳಗೆ ಸ್ಪರ್ಧೆಯನ್ನು ಏರ್ಪಡಿಸಿದ್ದರು.ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವಿದ್ಯಾರ್ಥಿಗಳು ಹಾಗೂ ಕಾಲೇಜು ವಿರುದ್ಧ ಜನಾಕ್ರೋಶ ಭುಗಿಲೆದ್ದಿತ್ತು.

ಇದೀಗ ಈ ಸಂಬಂಧ ವೀಡಿಯೋ ಮಾಡಿದ ಯುವಕನನ್ನು ಬಂಧಿಸಿದ ಪೊಲೀಸರು ಆತನ ಮೊಬೈಲ್ ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮತ್ತಷ್ಟು ವೀಡಿಯೋಗಳು ಲಭ್ಯವಾಗಿದ್ದು ವಿದ್ಯಾರ್ಥಿಗಳು ಸಂಪೂರ್ಣವಾಗಿ ನಗ್ನರಾಗಿ ಸೆಕ್ಸ್ ನಲ್ಲಿ ತೊಡಗಿರುವ ವೀಡಿಯೋ ಪತ್ತೆಯಾಗಿದೆ. ಇದೀಗ ಇದರ ಹಿಂದಿರುವ ಎಲ್ಲಾ ವಿದ್ಯಾರ್ಥಿಗಳನ್ನು ಪತ್ತೆ ಮಾಡಲು ಪೊಲೀಸರು ಬಲೆ ಬೀಸಿದ್ದು ಬಂಧಿತರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.

Post a Comment

0 Comments