ಆಳ್ವಾಸ್‌ನಲ್ಲಿ ಏವಿಯೇಷನ್ ಕೋರ್ಸಗಳು ಪ್ರಾರಂಭ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಏವಿಯೇಷನ್ ಕ್ಷೇತ್ರವು ವಿಫುಲ ಅವಕಾಶಗಳಿಗೆ ತೆರೆದುಕೊಳ್ಳುತ್ತಿರುವ ಉದ್ಯಮವಾಗಿ ಬೆಳೆಯುತ್ತಿರುವುದರಿಂದ ಭವಿಷ್ಯದ ಭದ್ರತೆಯ ನೆಲೆಯಲ್ಲಿ ವಿದ್ಯಾರ್ಥಿಗಳು ಈ ಕ್ಷೇತ್ರವನ್ನು   ಆಯ್ಕೆ ಮಾಡಿಕೊಳ್ಳಬಹುದು ಎಂದು ಮುಂಬೈ ಏರೋಡೈನಾಮಿಕ್ಸ್ ಏವಿಯೇಷನ್ ಅಕಾಡೆಮಿಯ ಸಂಸ್ಥಾಪಕ ದೇವಿ ಪ್ರಸಾದ್ ಶೆಟ್ಟಿ ಹೇಳಿದರು.

ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಏವಿಯೇಷನ್ ಕೋರ್ಸ್ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

 ಹೊಸ ವಿಮಾನಯಾನ ನೀತಿಯಿಂದ ದೇಶದಲ್ಲಿ  ಏರ್ಪೋರ್ಟ್ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಏವಿಯೇಶನ್ ಕಲಿತ ವಿದ್ಯಾರ್ಥಿಗಳಿಗೂ ಬೇಡಿಕೆ ಹೆಚ್ಚಾಗಲಿದೆ.  ಆ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿಅಂತರಾಷ್ಟ್ರೀಯ ಗುಣ ಮಟ್ಟದ ತರಬೇತಿ ನೀಡುವ ಉದ್ದೇಶದಿಂದ ಆಳ್ವಾಸ್ ಕಾಲೇಜಿನಲ್ಲಿ  ಮುಂಬೈನ ಏರೋಡೈನಾಮಿಕ್ಸ್  ಸಂಸ್ಥೆ ಈ ಕೋರ್ಸನ್ನು ಪ್ರಾರಂಭಿಸಿದೆ ಎಂದರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ 

ಮಾತನಾಡಿ, ಯಾವುದೇ ಕೆಲಸದಲ್ಲಿ ಸಫಲತೆಯನ್ನು ತಲುಪಬೇಕಾದರೆ ಮೊದಲಿನಿಂದಲೇ ಪ್ರಯತ್ನ ಅವಶ್ಯಕ.   ಎವಿಯೇಶನ್ ಕ್ಷೇತ್ರಕ್ಕೆ ಬೇಕಾದ ಕೌಶಲ್ಯಗಳ ಜತೆಗೆ ಶಿಷ್ಟಾಚಾರಗಳನ್ನು ಕಲಿಯುವುದು ಅಗತ್ಯ ಎಂದು ತಿಳಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಯಾವುದೇ ಕಾರ್ಯದ ಯಶಸ್ಸು ನಮ್ಮ ಆತ್ಮಸ್ಥರ್ಯದ ಮೇಲೆ ಅವಲಂಬಿತವಾಗಿರುತ್ತದೆ.   ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ನಮ್ಮ ಗುರಿ ತಲುಪಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಬಾಕ್ಸ್ ಐಟಮ್: ಆಳ್ವಾಸ್ ಕಾಲೇಜಿನಲ್ಲಿ ೬ ತಿಂಗಳ ಅವಧಿಯ ಕ್ಯಾಬಿನ್ ಕ್ರೀವ್ ಅಥವಾ ಏರ್‌ಹೊಸ್ಟೇಸ್  ಹಾಗೂ ೪ ತಿಂಗಳ ಅವಧಿಯ  ಪ್ರೋಪೇಶನಲ್ ಕಸ್ಟಮರ್ ಸರ್ವಿಸ್ ಮ್ಯಾನೇಜ್ಮೆಂಟ್  ಟ್ರಯಿನಿಂಗ್ ಕೋರ್ಸ್ಗಳು ಲಭ್ಯವಿವೆ.  ವಾರಾಂತ್ಯದಲ್ಲಿ ತರಬೇತಿ ತರಗತಿಗಳು ನಡೆಯುವುದರಿಂದ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಈ ಸೌಲಭ್ಯದ ಪ್ರಯೋಜನ ಪಡೆಯಬಹುದಾಗಿದೆ.

ವೇದಿಕೆಯಲ್ಲಿ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ,  ಲುಫ್ತಾನ್ಸಾ ಏರಲೈನ್ಸ್ನ ಕ್ಯಾಬಿನ್ ಕ್ರಿವ್ ಹಾಗೂ ಸಂಪನ್ಮೂಲ ವ್ಯಕ್ತಿ ಗೌತಮಿ ಭಂಡಾರಿ, ಸಹರಾ ಏರವೇಸ್‌ನ ರೋಶನ್ ಡಿಸೋಜಾ ಹಾಗೂ ಆಳ್ವಾಸ್ ಏವಿಯೇಷನ್ ಕೋರ್ಸನ ಸಂಯೋಜಕಿ ರಾಜಶ್ರೀ ರಾವ್ ಉಪಸ್ಥಿತರಿದ್ದರು.

 ಕಾರ್ಯಕ್ರಮವನ್ನು ವಿಕ್ರಮ್ ನಿರೂಪಿಸಿ, ರಾಜಶ್ರೀ ಸ್ವಾಗತಿಸಿ, ನವ್ಯ ಭಟ್ ವಂದಿಸಿದರು.

Post a Comment

0 Comments