ಮೂಡುಬಿದಿರೆ : ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಗರ್ಭಗುಡಿಗಳ ಶಿಲಾನ್ಯಾಸದ ಬಳಿಕ ಮೊದಲ ಹಂತದಲ್ಲಿ ಪಾದುಕಾನ್ಯಾಸ ಕಾರ್ಯಕ್ರಮ ಸೋಮವಾರ ಮುಂಜಾನೆ ಎಡಪದವು ತಂತ್ರಿವರ್ಯರ ನೇತೃತ್ವದಲ್ಲಿ ಜರಗಿತು.
ಆನುವಂಶಿಕ ಆಡಳಿತ ಮೊಕ್ತೇಸರ ಕುಲದೀಪ ಎಂ., ಅರ್ಚಕ ಅಡಿಗಳ್ ಅನಂತಕೃಷ್ಣ ಭಟ್, ಪವಿತ್ರಪಾಣಿ ಶಿವಪ್ರಸಾದ್ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಪ್ರಮುಖರಾದ ವಿದ್ಯಾರಮೇಶ ಭಟ್, ಕೆ. ಶ್ರೀಪತಿ ಭಟ್, ವಾದಿರಾಜ ಮಡ್ಮಣ್ಣಾಯ, ಎಚ್. ಧನಕೀರ್ತಿ ಬಲಿಪ, ಜಿ. ಉಮೇಶ ಪೈ, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಜಯಶ್ರೀ ಅಮರನಾಥ ಶೆಟ್ಟಿ, ನೀಲೇಶ್ ಶೆಟ್ಟಿ ಕೊಲಕಾಡಿಗುತ್ತು, ಮಾಳಿಗೆಮನೆ ಉದಯಕುಮಾರ್, ಪುತ್ತಿಗೆಮನೆ ಧನಂಜಯ ಆಚಾರ್ಯ,
ಪುತ್ತಿಗೆ ಕುಮಾರ ಗೌಡ, ಪ್ರಶಾಂತ್ ಭಂಡಾರಿ, ಶ್ಯಾನಭೋಗ ರವಿಶಂಕರ ಸಹಿತ ಭಕ್ತಾದಿಗಳು ಉಪಸ್ಥಿತರಿದ್ದರು.
0 Comments